ನವದೆಹಲಿ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ ನೂತನ ಸಮವಸ್ತ್ರವನ್ನು ಬಿಸಿಸಿಐ ಬುಧವಾರ ಅನಾವರಣಗೊಳಿಸಿದೆ.

'ಬಿಲಿಯನ್ ಚಿಯರ್ಸ್ ಜೆರ್ಸಿ' ಎಂದು ಕರೆಯಲ್ಪಡುವ ನೂತನ ಸಮವಸ್ತ್ರ ಅಭಿಮಾನಿಗಳಿಂದ ಸ್ಫೂರ್ತಿ ಪಡೆದು ತಯಾರಿಸಲಾಗಿದೆ. ಇದನ್ನು ಭಾರತದ ಪುರುಷ, ಮಹಿಳಾ ಮತ್ತು ಅಂಡರ್-19 ತಂಡಗಳ ಅಧಿಕೃತ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಅನಾವರಣಗೊಳಿಸಿದೆ.

ಇದನ್ನೂ ಓದಿ:ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ‘ವಿದಾಯ’

ಬಿಸಿಸಿಐ ಆತಿಥ್ಯ ವಹಿಸುತ್ತಿರುವ ಟ್ವೆಂಟಿ-20 ವಿಶ್ವಕಪ್ ಯುಎಇ ಹಾಗೂ ಒಮಾನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿತ್ತು.

ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜೆರ್ಸಿಯಲ್ಲಿ ಅಭಿಮಾನಿಗಳಿಗಳನ್ನು ಸ್ಮರಿಸುವುದು ಇದೇ ಮೊದಲು. ಇದು ಹಿಂದಿನ ಐಕಾನಿಕ್ ಪಂದ್ಯಗಳಿಂದ ವಿಶಿಷ್ಟ ಧ್ವನಿ ತರಂಗವಾಗಿ ರೂಪಾಂತರಗೊಂಡ ಅಭಿಮಾನಿಗಳ ಹರ್ಷೋದ್ಗಾರವನ್ನು ಸೂಚಿಸುತ್ತದೆ.

'ಟೀಮ್ ಇಂಡಿಯಾವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಅಭಿಮಾನಿಗಳ ಉತ್ಸಾಹ ಹಾಗೂ ಪುಳಕವನ್ನು ಸಂಭ್ರಮಿಸಲು ಈ ಜೆರ್ಸಿ ಧರಿಸುವುದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದು, 'ಜೆರ್ಸಿಯಲ್ಲಿ ಪ್ರತಿಯೊಬ್ಬ ಭಾರತೀಯ ಅಭಿಮಾನಿಯ ಕಥೆ ಅಡಗಿದ್ದು, ಇದನ್ನು ಧರಿಸುವುದು ತಂಡ ಹಾಗೂ ಬೆಂಬಲಿಗರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ' ಎಂದು ಹೇಳಿದ್ದಾರೆ.

ಜೆರ್ಸಿ ಬೆಲೆ ₹1,799. ತಂಡದ ಆವೃತ್ತಿ, ನಾಯಕ ವಿರಾಟ್ ಕೊಹ್ಲಿ ಅವರ ಸಂಖ್ಯೆ 18 ಸೇರಿದಂತೆ 10ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.