ನವದೆಹಲಿ: ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅವರು ಗುರುವಾರ ಮನೆಗೆ ಮರಳಿದ್ದಾರೆ.

74 ವರ್ಷದ ಬೇಡಿ ಅವರು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇಲ್ಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಅವರು ಈ ಚಿಕಿತ್ಸೆ ಪಡೆದಿದ್ದರು. ಅದರ ನಂತರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅದಕ್ಕೂ ಶಸ್ತ್ರಚಿಕಿತ್ಸೆ ಆಗಿತ್ತು.

’ಶಸ್ತ್ರಚಿಕಿತ್ಸೆ ಮಾಡಿದ್ದ ಹೃದಯದ ಮೂರು ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಫೆ. 18ರಂದು ಡಾ. ಗಣೇಶ್ ಶಿವಮಣಿ ಅವರು ಬೈಪಾಸ್ ಸರ್ಜರಿ ಮಾಡಿದ್ದರು. ಬೇಡಿಯವರು ಚೇತರಿಸಿಕೊಂಡಿದ್ದು, ಗುರುವಾರ ಮನೆಗೆ ಕಳುಹಿಸಲಾಗಿದೆ‘ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.