ಬೆಳಗಾವಿ: ಆಲ್ರೌಂಡ್ ಆಟವಾಡಿದ ಬಿ. ಜವರೇಗೌಡ ಅವರ ನೆರವಿನಿಂದ ಕರ್ನಾಟಕ ಅಂಧರ ಕ್ರಿಕೆಟ್ ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಭಾನುವಾರ ಆರಂಭವಾದ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು ಜಯಿಸಿತು.

ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್ಇಂಡ್ ಬ್ಯಾಂಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಹಯೋಗದಲ್ಲಿ ‘ನಾಗೇಶ ಟ್ರೋಫಿ’ಯ ಲೀಗ್ ಪಂದ್ಯಗಳು ಇಲ್ಲಿ ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಕರ್ನಾಟಕವು ಎಂಟು ವಿಕೆಟ್ಗಳಿಂದ ಗೋವಾ ಎದುರು ಜಯಿಸಿತು.

ಟಾಸ್ ಗೆದ್ದ ಕರ್ನಾಟಕ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಗೋವಾ ತಂಡ 20 ಓವರುಗಳಲ್ಲಿ 4 ವಿಕೆಟ್
ನಷ್ಟಕ್ಕೆ 161 ರನ್ ಕಲೆಹಾಕಿತು. ಗೌರವ ಝಾಡೆ (53 ರನ್, 37 ಎಸೆತ, 6 ಬೌಂಡರಿ), ಸಂದೀಪ ಗುಗೆ (42 ರನ್, 37 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು. ಕರ್ನಾಟಕದ ಬಿ.ಜವರೇಗೌಡ, ಎಸ್.ಕೃಷ್ಣಮೂರ್ತಿ, ಬಸವರಾಜ ಹುಲ್ಲೆನ್ನವರ ತಲಾ 1 ವಿಕೆಟ್ ಕಬಳಿಸಿದರು.

ಈ ಗುರಿ ಬೆನ್ನಟ್ಟಿದ ಕರ್ನಾಟಕದ ಆಟಗಾರರು 12.3 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿ ಗೆಲುವು ಸಾಧಿಸಿದರು. ಬಿ.ಜವರೇಗೌಡ (49 ರನ್, 25 ಎಸೆತ, 10 ಬೌಂಡರಿ), ಬಸಪ್ಪ ವಡ್ಡಗೋಳ (ಅಜೇಯ 38 ರನ್, 20 ಎಸೆತ),
ಪುನೀತ್ ಕೆ.ಎಸ್. (33 ರನ್, 21 ಎಸೆತ, 7 ಬೌಂಡರಿ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬ್ಯಾಟಿಂಗ್
ಮತ್ತು ಬೌಲಿಂಗ್ನಲ್ಲಿ ಮಿಂಚಿದ ಜವರೇಗೌಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾದರು.

ಎರಡನೇ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು ಪಶ್ಚಿಮ ಬಂಗಾಳ ವಿರುದ್ಧ 23 ರನ್ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಗೋವಾ ಸಿಎಬಿಐ: 20 ಓವರ್ಗಳಲ್ಲಿ 161 (ಆಶುತೋಷ್ ಮವಾಸ್ಕರ್ 33, ಗೌರವ್ ಝಡೆ 53, ಸಂದೀಪ್ ಗಗೆ ಔಟಾಗದೆ 42, ಜವರೇಗೌಡ 10ಕ್ಕೆ1, ಬಸವರಾಜ್ ಹುಲ್ಲೇನವರ 16ಕ್ಕೆ1) ಕರ್ನಾಟಕ: 12.3 ಓವರ್ಗಳಲ್ಲಿ 2 ವಿಕೆಟ್ಗಳಿಗೆ 165 (ಕೆ.ಎಸ್. ಪುನೀತ್ 33, ಬಿ ಜವರೇಗೌಡ 49, ಬಸಪ್ಪ ವಡ್ಡಗೋಲು ಔಟಾಗದೇ 38, ಆರ್. ಸುನೀಲ್ ಔಟಾಗದೆ 24, ವಿಕಾಸ್ ಬನ್ಸೊಡೆ 24ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.