ನವದೆಹಲಿ: ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ಪತ್ನಿ ಮತ್ತು ಮಕ್ಕಳನ್ನು ಗುರಿಯಾಗಿಸಿ 'ಸ್ತ್ರೀ ದ್ವೇಷಿ' ಹೇಳಿಕೆಗಳನ್ನು ನೀಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯೂ) ನಗರ ಪೊಲೀಸರಿಗೆ ನೋಟಿಸ್ ನೀಡಿದೆ.

ಧೋನಿ ಅವರ 7 ವರ್ಷದ ಮಗಳು ಮತ್ತು ಕೊಹ್ಲಿ ಅವರ ಎರಡು ವರ್ಷದ ಮಗಳನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುವವರ ವಿರುದ್ಧ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

'ಎರಡೂ ಮಕ್ಕಳು ಮತ್ತು ಅವರ ತಾಯಿಯಂದಿರ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ ಹಂಚಿಕೆಯಾಗಿರುವ ಪೋಸ್ಟ್‌ಗಳು ಅಶ್ಲೀಲ, ಸ್ತ್ರೀದ್ವೇಷಿ ಮತ್ತು ನಿಂದನಾತ್ಮಕವಾಗಿವೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ' ಎಂದು ಆಯೋಗವು ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

ತೆಗೆದುಕೊಳ್ಳಲಾದ ಕ್ರಮದ ಕುರಿತು ವಿಸ್ತೃತ ವರದಿಯನ್ನು ಜನವರಿ 16ರ ಒಳಗಾಗಿ ನೀಡುವಂತೆ ಹೇಳಲಾಗಿದೆ. ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಇದೇ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿದ್ದರು.

'ದೇಶದ ಇಬ್ಬರು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಧೋನಿ ಅವರ ಮಕ್ಕಳ ಚಿತ್ರಗಳನ್ನು ಟ್ವಿಟರ್‌ನ ಕೆಲವು ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅಸಭ್ಯವಾಗಿ ಕಾಮೆಂಟ್ ಹಾಕಲಾಗುತ್ತಿದೆ. 7 ವರ್ಷ ಮತ್ತು 2 ವರ್ಷದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಲಾಗುತ್ತಿದೆ. ನಿಮಗೆ ಆಟಗಾರ ಇಷ್ಟವಾಗದಿದ್ದರೆ, ಅವರ ಹೆಣ್ಣು ಮಕ್ಕಳನ್ನು ನಿಂದಿಸುವಿರಾ? ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನೋಟಿಸ್ ನೀಡಲಾಗಿದೆ' ಎಂದು ಸ್ವಾತಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.