ಮೆಲ್ಬರ್ನ್ : ಸುದೀರ್ಘ ಸಮಯದ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ‘ಬಾಕ್ಸಿಂಗ್ ಡೇ’ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ.

ಈ ಎರಡೂ ನೆರೆಹೊರೆಯ ರಾಷ್ಟ್ರಗಳು 1987ರ ಡಿಸೆಂಬರ್ 26ರಂದು ಇಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಡಿದ್ದವು. ಕಿವೀಸ್ ತಂಡದಲ್ಲಿರುವ ನೀಲ್ ವಾಗ್ನರ್, ರಾಸ್ ಟೇಲರ್, ಬಿ.ಜೆ. ವಾಟ್ಲಿಂಗ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರೆಲ್ಲರೂ ಆ ವರ್ಷದ ಆಸುಪಾಸಿನಲ್ಲಿ ಜನಿಸಿದ್ದರಷ್ಟೇ. ಇವರನ್ನು ಬಿಟ್ಟರೆ ಈ ಪಂದ್ಯದಲ್ಲಿ ಆಡುತ್ತಿರುವ ಯಾರೂ ಅಗಿನ್ನೂ ಜನಿಸಿರಲಿಲ್ಲ!

ಸರಿದು ಹೋದ ಮೂರು ದಶಕಗಳಲ್ಲಿ ಉಭಯ ದೇಶಗಳ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಈ ಪಂದ್ಯದಲ್ಲಿ ಗೆಲ್ಲಲು ಎರಡೂ ತಂಡಗಳು ತುದಿಗಾಲಿನಲ್ಲಿ ನಿಂತಿವೆ. ದೀರ್ಘ ಕಾಲದ ನಂತರ ಮುಖಾಮುಖಿಯಾಗುತ್ತಿರುವ ಬಾಕ್ಸಿಂಗ್ ಡೇ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಳ್ಳುವ ಛಲ ಆಟಗಾರರದ್ದು.

‘ನ್ಯೂಜಿಲೆಂಡ್‌ನ ಬಹಳಷ್ಟು ದಿಗ್ಗಜ ಆಟಗಾರರಿಗೆ ಇಂತಹದೊಂದು ಅವಕಾಶ ಲಭಿಸಲಿಲ್ಲ. ಈ ಪಂದ್ಯದಲ್ಲಿ ಆಡುತ್ತಿರುವುದು ನಮಗೆ ವಿಶೇಷ ಅನುಭವ’ ಎಂದು ಕಿವೀಸ್ ಬೌಲರ್ ಟಿಮ್ ಸೌಥಿ ಹೇಳುತ್ತಾರೆ.

ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು 75 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಮೈದಾನಕ್ಕೆ ಲಗ್ಗೆ ಇಡಲಿದ್ದಾರೆ. ಕ್ರಿಸ್‌ಮಸ್ ರಜೆಯ ಭರಪೂರ ಮನರಂಜನೆ ಅನುಭವಿಸಲು ಸಿದ್ಧರಾಗಿದ್ದಾರೆ.

ತಂಡಗಳು

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ಟಾಮ್ ಬ್ಲಂಡೆಲ್, ರಾಸ್ ಟೇಲರ್, ಹೆನ್ರಿ ನಿಕೊಲ್ಸ್, ಬಿ.ಜೆ. ವಾಟ್ಲಿಂಗ್ (ವಿಕೆಟ್‌ಕೀಪರ್), ಕಾಲಿನ್ ಡೇ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟನರ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್, ಟಾಡ್ ಆ್ಯಸ್ಲೆ, ಜೀತ್ ರಾವಲ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್.

ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ/ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಜೋ ಬರ್ನಸ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೇಮ್ಸ್ಯಾಟಿನ್ಸನ್, ಮೈಕಲ್ ನೆಸೆರ್, ಪೀಟರ್ ಸಿಡ್ಲ್.

ಮರಾಯಸ್ ಎರಸ್ಮಸ್, ನಿಗೆಲ್ ಲಾಂಗ್ (ಅಂಪೈರ್ಸ್), ಅಲೀಂ ದಾರ್ (ಮೂರನೇ ಅಂಪೈರ್), ಸರ್. ರಿಚಿ ರಿಚರ್ಡ್ಸನ್ (ರೆಫರಿ),

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.