ನವದೆಹಲಿ: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ನನಗಿಂತಲೂ ಸಾವಿರ ಪಟ್ಟು ಅತ್ಯುತ್ತಮ ಬೌಲರ್ ಎಂದು ಭಾರತದ ಮಾಜಿ ಆಲ್‌ರೌಂಡರ್ ಕಪಿಲ್ ದೇವ್ ಹೇಳಿದ್ದಾರೆ.

ಪ್ರಸ್ತುತ, ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಬೂಮ್ರಾ, ಈವರೆಗೆ 23 ಓವರ್‌ಗಳಲ್ಲಿ 4.08 ಎಕಾನಮಿಯಲ್ಲಿ 11 ವಿಕೆಟ್ ಉರುಳಿಸಿದ್ದಾರೆ.

‘ಬೂಮ್ರಾ ನನಗಿಂತಲೂ 1000 ಪಟ್ಟು ಉತ್ತಮವಾಗಿದ್ದಾರೆ. ಈಗ ತಂಡದಲ್ಲಿರುವ ಯುವ ಆಟಗಾರರು ನಮಗಿಂತ ಒಳ್ಳೆಯ ಆಟಗಾರರಾಗಿದ್ದಾರೆ. ನಾವು ಹೆಚ್ಚು ಅನುಭವ ಹೊಂದಿದ್ದೇವೆ. ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ’ಎಂದು ಕಪಿಲ್ ದೇವ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಎನಿಸಿಕೊಂಡಿರುವ ಬೂಮ್ರಾ ಭಾರತದ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಮೂರಕ್ಕೂ ಕಡಿಮೆ ಎಕಾನಮಿಯಲ್ಲಿ 159 ವಿಕೆಟ್ ಕಬಳಿಸಿದ್ದಾರೆ. 89 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 149 ವಿಕೆಟ್ ಮತ್ತು 68 ಟಿ–20 ಪಂದ್ಯಗಳಲ್ಲಿ 89 ವಿಕೆಟ್ ಗಳಿಸಿದ್ದಾರೆ.

ಭಾರತದ ಸಾರ್ವಕಾಲಿಕ ಬೆಸ್ಟ್ ಆಲ್‌ರೌಂಡರ್ ಎನಿಸಿರುವ ಕಪಿಲ್ ದೇವ್, 434 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 253 ವಿಕೆಟ್ ಪಡೆದಿದ್ದಾರೆ.

1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ತಂಡದ ನಾಯಕರಾಗಿದ್ದ 65 ವರ್ಷದ ಕಪಿಲ್ ದೇವ್, ಪ್ರಸ್ತುತ ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್ ಅನ್ನು ಕೊಂಡಾಡಿದ್ದಾರೆ.

‘ಟೀಮ್ ಇಂಡಿಯಾ ಆಟಗಾರರು ನಿಜವಾಗಿಯೂ ಸದೃಢರಾಗಿದ್ದಾರೆ. ಉತ್ತಮ ಫಿಟ್ನೆಸ್ ಇದೆ. ಅವರು ಬಹಳಷ್ಟು ಶ್ರಮಪಡುತ್ತಾರೆ’ ಎಂದು ಕಪಿಲ್ ಪ್ರಶಂಸಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.