ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಬೂಮ್ರಾ ಉಪನಾಯಕ

Published : 12 ಅಕ್ಟೋಬರ್ 2024, 3:01 IST
Last Updated : 12 ಅಕ್ಟೋಬರ್ 2024, 3:01 IST
ಫಾಲೋ ಮಾಡಿ
Comments

ನವದೆಹಲಿ: ಮುಂಬರುವ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.

ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಜಸ್‌ಪ್ರೀತ್ ಬೂಮ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.

ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜ ಸೇರಿದಂತೆ ಅನುಭವಿ ಆಟಗಾರರು ತಂಡದಲ್ಲಿದ್ದಾರೆ.

ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳೆ ತಂಡದಲ್ಲಿದ್ದ ಯಶ್ ದಯಾಳ್ ಅವರನ್ನು ಗಾಯದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.

15 ಮಂದಿ ಸದಸ್ಯರ ಹೊರತಾಗಿ ನಾಲ್ಕು ಮಂದಿ ಮೀಸಲು ಆಟಗಾರರನ್ನು ತಂಡದಲ್ಲಿ ಹೆಸರಿಸಲಾಗಿದೆ. ಹರ್ಷೀತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಂಕ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ತಂಡದ ಜೊತೆಗೆ ಪ್ರಯಾಣಿಸಲಿದ್ದಾರೆ.

ಭಾರತ ತಂಡ ಇಂತಿದೆ:

  • ರೋಹಿತ್ ಶರ್ಮಾ (ನಾಯಕ),

  • ಜಸ್‌ಪ್ರೀತ್ ಬೂಮ್ರಾ (ಉಪನಾಯಕ),

  • ಯಶಸ್ವಿ ಜೈಸ್ವಾಲ್,

  • ಶುಭಮನ್ ಗಿಲ್,

  • ವಿರಾಟ್ ಕೊಹ್ಲಿ,

  • ಕೆ.ಎಲ್. ರಾಹುಲ್,

  • ಸರ್ಫರಾಜ್ ಖಾನ್,

  • ರಿಷಭ್ ಪಂತ್ (ವಿಕೆಟ್ ಕೀಪರ್),

  • ಧ್ರುವ್ ಜುರೇಲ್ (ವಿಕೆಟ್ ಕೀಪರ್),

  • ರವಿಚಂದ್ರನ್ ಅಶ್ವಿನ್,

  • ರವೀಂದ್ರ ಜಡೇಜ,

  • ಅಕ್ಷರ್ ಪಟೇಲ್,

  • ಕುಲದೀಪ್ ಯಾದವ್,

  • ಮೊಹಮ್ಮದ್ ಸಿರಾಜ್,

  • ಆಕಾಶ್ ದೀಪ್.

ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:

ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು

ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ

ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT