ಹ್ಯಾಮಿಲ್ಟನ್: ನಾಯಕ ಕೇನ್ ವಿಲಿಯಮ್ಸನ್ (ಅಜೇಯ 104) ಮತ್ತು ಅನುಭವಿ ರಾಸ್ ಟೇಲರ್ (ಅಜೇಯ 105) ಅವರು ಶತಕಗಳನ್ನು ಬಾರಿಸಿದರು. ಅದರೊಂದಿಗೆ ಆತಿಥೇಯ ನ್ಯೂಜಿಲೆಂಡ್ ಸೆಡನ್ ಪಾರ್ಕ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆತಿಥೇಯರು ಎರಡು ಪಂದ್ಯಗಳ ಸರಣಿಯನ್ನು 1–0 ಯಿಂದ ಗೆದ್ದುಕೊಂಡರು. ಪ್ರತಿಕೂಲ ಹವೆಯಿಂದ ಕೊನೆಯ ದಿನವಾದ ಮಂಗಳವಾರ ಲಂಚ್ ವಿರಾಮದ ನಂತರ ಐದು ಓವರ್ಗಳ ಆಟವಷ್ಟೇ ಸಾಧ್ಯವಾಯಿತು.

2 ವಿಕೆಟ್ಗೆ 96 ರನ್ಗಳೊಡನೆ ಅಂತಿಮ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ 2 ವಿಕೆಟ್ಗೆ 241 ರನ್ ಗಳಿಸಿತು. ವಿಲಿಯಮ್ಸನ್ಗೆ ಇದು ಟೆಸ್ಟ್ಗಳಲ್ಲಿ 21ನೇ ಶತಕ. ಟೇಲರ್ಗೆ 19ನೇಯದು.

ಕಳೆದ 10 ಸರಣಿಗಳಲ್ಲಿ ನ್ಯೂಜಿಲೆಂಡ್ ಎಂಟು ಗೆದ್ದುಕೊಂಡಿದ್ದು, ಒಂದು ಡ್ರಾ ಮಾಡಿಕೊಂಡು, ಒಂದು (ದಕ್ಷಿಣ ಆಫ್ರಿಕ ಎದುರು) ಸೋತಿದೆ.

ಇಂಗ್ಲೆಂಡ್ಗೆ ಸಮಾಧಾನದ ವಿಷಯವೆಂದರೆ ನಾಯಕ ಹಾಗೂ ‘ಪಂದ್ಯದ ಆಟಗಾರ’ ಜೋ ರೂಟ್, ದ್ವಿಶತಕದೊಡನೆ ಲಯಕ್ಕೆ ಮರಳಿದ್ದು. ಅದು ದಕ್ಷಿಣ ಆಫ್ರಿಕ ವಿರುದ್ಧ ನಾಲ್ಕು ಟೆಸ್ಟ್ಗಳ ಸರಣಿಯನ್ನು ಆಡಲಿದೆ.

ನ್ಯೂಜಿಲೆಂಡ್, ಶನಿವಾರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿ ಮೂರು ಟೆಸ್ಟ್ಗಳ ಸರಣಿಯನ್ನು ಆಡಲಿದೆ. ಈಗಿನ ಸರಣಿ ಗೆಲುವಿನಿಂದ ಕಿವೀಸ್, ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತದ ನಂತರ ಎರಡನೇ ಸ್ಥಾನದಲ್ಲಿದೆ.

ಸ್ಕೋರುಗಳು: ನ್ಯೂಜಿಲೆಂಡ್: 375 ಮತ್ತು 2 ವಿಕೆಟ್ಗೆ 241 (ಕೇನ್ ವಿಲಿಯಮ್ಸನ್ ಔಟಾಗದೇ 104, ರಾಸ್ ಟೇಲರ್ ಔಟಾಗದೇ 105); ಇಂಗ್ಲೆಂಡ್: 476.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.