ಬೆಂಗಳೂರು: ಕರ್ನಾಟಕ ತಂಡವು ಬಲಂಗೀರ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ಎದುರಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದೆ.

ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 389 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಒಡಿಶಾ ತಂಡವು 62.3 ಓವರ್ಗಳಲ್ಲಿ 185 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕದ ಎಲ್. ಮನ್ವಂತ್ ಕುಮಾರ್ (46ಕ್ಕೆ6) ಒಡಿಶಾ ತಂಡದ ವಿಕೆಟ್ಗಳ ಪತನಕ್ಕೆ ಕಾರಣರಾದರು. ಇದರೊಂದಿಗೆ ಕರ್ನಾಟಕವು ಒಡಿಶಾ ಮೇಲೆ ಫಾಲೋ ಆನ್ ಹೇರಿತು.

ಸಾವನ್ ಪೆಹಾರಿಯಾ (ಔಟಾಗದೆ 91) ಮತ್ತು ಸುಜಲ್ ಸಿಂಗ್ (ಔಟಾಗದೆ 72) ಅವರ ಬ್ಯಾಟಿಂಗ್ ಬಲದಿಂದ ಒಡಿಶಾ ತಂಡವು ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ಗಳಿಗೆ 274 ರನ್ ಗಳಿಸಿದೆ. 70 ರನ್ಗಳ ಮುನ್ನಡೆ ಪಡೆದಿದೆ. ಇದರಿಂದಾಗಿ ಕರ್ನಾಟಕ ತಂಡವು ಬೆಳಗಿನ ಅವಧಿಯಲ್ಲಿ ಒಡಿಶಾದ ಇನ್ನುಳಿದ ವಿಕೆಟ್ಗಳನ್ನು ಉರುಳಿಸಿ ಲಭಿಸುವ ಸಾಧಾರಣ ಮೊತ್ತದ ಗುರಿಯನ್ನು ಮುಟ್ಟಿ ಜಯಿಸುವ ನಿರೀಕ್ಷೆಯಲ್ಲಿದೆ. ಎರಡನೇ ಇನಿಂಗ್ಸ್ನಲ್ಲಿ ಮನ್ವಂತ್ ಅವರು 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು:

ಕರ್ನಾಟಕ 389. ಒಡಿಶಾ 62.3 ಓವರ್ಗಳಲ್ಲಿ 185 (ಸಾಯಿದೀಪ್ ಮಹಾಪಾತ್ರ 58, ಮೊನಿಷ್ ರೆಡ್ಡಿ ವೈಆರ್. 48ಕ್ಕೆ4, ಮನ್ವಂತ್ ಕುಮಾರ್ 46ಕ್ಕೆ6) ಒಡಿಶಾ (ಫಾಲೋ ಆನ್); 75 ಓವರ್ಗಳಲ್ಲಿ 6ಕ್ಕೆ274 (ಓಂ 45, ಸಾವನ್ ಪೆಹಾರಿಯಾ ಔಟಾಗದೆ 91, ಸಂಬಿತ್ ಬರಾಲಾ 36, ಸುಜಲ್ ಸಿಂಗ್ ಔಟಾಗದೆ 72, ಮನ್ವಂತ್ ಕುಮಾರ್ 41ಕ್ಕೆ2, ಪಾರಸ್ ಗುರುಭಕ್ಷ ಆರ್ಯ 65ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.