ಮುಂಬೈ: ನಿವೃತ್ತ ಕ್ರಿಕೆಟಿಗರಿಗೆ ಕೂಲಿಂಗ್ ಆಫ್ ನಿಯಮ ವಿಧಿಸುವುದರಿಂದ ವಿದೇಶಿ ಲೀಗ್ ಟೂರ್ನಿಗಳಲ್ಲಿ ಆಡುವುದಕ್ಕೆ ಅಡ್ಡಿಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟರು.

ಭಾರತದಲ್ಲಿ ಕ್ರಿಕೆಟಿಗರು ನಿವೃತ್ತಿ ಪಡೆದು ವಿದೇಶಿ ಲೀಗ್ಗಳಿಗೆ ಹೋಗುವ ಮುನ್ನ ನಿಗದಿಯ ಅವಧಿಯ ಕೂಲಿಂಗ್ ಆಫ್ ನಿಯಮ ಜಾರಿಗೆ ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸಿದೆ. ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

‘ಅವಕಾಶ ಸಿಗದಿದ್ದಾಗ ಮಾನವಸಹಜವಾಗಿ ಅಭದ್ರತೆ ಕಾಡುತ್ತದೆ. ನಾವು (ನಿವೃತ್ತರು) ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಇಲ್ಲ. ಇನ್ನು ಮುಂದೆ ನಮ್ಮ ದೇಶದೊಳಗೆ ನಾವು ಆಡಲು ಸಾಧ್ಯವೂ ಇಲ್ಲ. ಜೊತೆಗೆ ಕೂಲಿಂಗ್ ಆಫ್ ಬಂದರೆ ಬೇರೆ ಕಡೆ ಹೋಗಲೂ ಆಗದು‘ ಎಂದು ಜಿಯೊ ಸಿನಿಮಾ ಏರ್ಪಡಿಸಿದ್ದ ಸಂವಾದದಲ್ಲಿ ಬೇಸರ ವ್ಯಕ್ತಪಡಿಸಿದರು.

ಕೊಡಗಿನ ರಾಬಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ನಿಂದ ಈಚೆಗೆ ನಿವೃತ್ತಿ ಘೋಷಿಸಿದ್ಧಾರೆ.

‘ಈ ಸಮಸ್ಯೆಗೆ ಪರಿಹಾರ ಸೂತ್ರಗಳನ್ನು ಚರ್ಚಿಸಲು ಅವಕಾಶವಿದೆ. ಎಲ್ಲರಿಗೂ ಅನುಕೂಲವಾಗುವಂತಹ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.