ಬ್ರಿಸ್ಬೇನ್: ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್, ‘ಪ್ರತಿ ವ್ಯಕ್ತಿಯೂ ಭಿನ್ನ. ಪ್ರತಿಯೊಂದು ಮಂಡಳಿಯೂ ವಿಭಿನ್ನ. ಕೆಲವುಸಮಸ್ಯೆಗಳನ್ನು ಅದರದೇ ಅದ ರೀತಿಯಲ್ಲಿ ಇತ್ಯರ್ಥಪಡಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚೆಂಡು ವಿರೂಪಗೊಳಿಸಿದ ಪೂರನ್ ಅಮಾನತು

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ಹೇರಿತ್ತು. ಈ ಕುರಿತು, ‘ಅದು ಕಠಿಣ ಎಂದು ನಾನು ಭಾವಿಸುವುದಿಲ್ಲ. ಅದು ತುಂಬಾ ಹಿಂದಿನದು. ನಾನೀಗ ಸಾಕಷ್ಟು ಮುಂದೆ ಬಂದಿದ್ದೇನೆ. ಸದ್ಯ ಈಗಿನದರ ಮೇಲಷ್ಟೇ ಗಮನ ಕೇಂದ್ರೀಕರಿಸಿದ್ದೇನೆ’ ಎಂದಿದ್ದಾರೆ.

‘ನಾನು ಐಸಿಸಿ ಸಮಿತಿಯ ಶಿಕ್ಷೆಯನ್ನು ಒಪ್ಪಿಕೊಂಡಿದ್ದೆ. ನನ್ನಿಂದ ಮತ್ತೆ ಇಂತಹ ತಪ್ಪು ಮರುಕಳಿಸುವುದಿಲ್ಲ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ’ ಎಂದೂ ಹೇಳಿದ್ದಾರೆ.

ಕೆರಿಬಿಯನ್ ಪ್ರಿಮಿಯರ್ ಲೀಗ್ನಲ್ಲಿಸ್ಮಿತ್ ಹಾಗೂ ಪೂರನ್ ಒಂದೇ ತಂಡದಲ್ಲಿ ಆಡಿದ್ದಾರೆ. ಪೂರನ್ ಕುರಿತು ಸ್ಮಿತ್, ‘ಪೂರನ್ ಜೊತೆ ಕೆಲವು ಪಂದ್ಯಗಳನ್ನು ಆಡಿದ್ದೇನೆ. ಪ್ರತಿಭಾವಂತ ಆಟಗಾರನಾದ ಅವರಿಗೆ ಉಜ್ವಲ ಭವಿಷ್ಯವಿದೆ. ಸದ್ಯದ ತಪ್ಪಿನಿಂದ ಅವರು ಪಾಠ ಕಲಿತುಕೊಳ್ಳಲಿದ್ದಾರೆ’ ಎಂದಿದ್ದಾರೆ.

ನಿಷೇಧ ಶಿಕ್ಷೆ ಮುಗಿಸಿ ವಾಪಸ್ ಆಗಿದ್ದ ಸ್ಮಿತ್, ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ನಾಲ್ಕುಪಂದ್ಯಗಳ 7 ಇನಿಂಗ್ಸ್ಗಳಿಂದ 110.57 ಸರಾಸರಿಯಲ್ಲಿ 774 ರನ್ ಕಲೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.