ಯುವರಾಜ್ ಸಿಂಗ್... ಈ ಹೆಸರು ಭಾರತ ಕ್ರಿಕೆಟ್‌ನಲ್ಲಿ ಮೂಡಿಸುವ ಸಂಚಲನ ಅಷ್ಟಿಷ್ಟಲ್ಲ. ಕಪಿಲ್ ದೇವ್ ನಂತರ ಕ್ರಿಕೆಟ್‌ಗೆ ದಕ್ಕಿದ ಶ್ರೇಷ್ಠ ಆಲ್‌ರೌಂಡರ್ ಎಂಬುದು ನಿಸ್ಸಂಶಯ. 2000ನೇ ಇಸವಿಯಲ್ಲಿ ಅವರು ನೈರೋಬಿ ಐಸಿಸಿ ನಾಕೌಟ್ ಸರಣಿಯ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ತಂಡದಲ್ಲಿ ದಿಗ್ಗಜರ ಪಾರುಪತ್ಯ ಇತ್ತು. ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಸೌರವ್ ಗಂಗೂಲಿ, ಲಕ್ಷ್ಮಣ್, ರಾಹುಲ್ ದ್ರಾವಿಡ್ ಅವರಂತಹ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರು. ಅವರೆಲ್ಲರೂ ಫಾರ್ಮ್‌ನ ಉತ್ತುಂಗದಲ್ಲಿದ್ದ ಕಾಲ ಅದು. ತುಸು ಒರಟು ಸ್ವಭಾವಿಯಂತೆ ಕಂಡರೂ ತಂಡದ ಹಿರಿ–ಕಿರಿಯರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಪಂಜಾಬಿ ಹುಡುಗ ಏರಿದ ಎತ್ತರ ಸಣ್ಣದಲ್ಲ.

ತನ್ನ ‘ರೋಲ್ ಮಾಡೆಲ್’ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಡುವ ಅವಕಾಶ ವನ್ನು ವ್ಯರ್ಥ ಮಾಡಿಕೊಳ್ಳಲಿಲ್ಲ. ಅವರಿಂದ ಕಲಿಯುವ ಅವಕಾಶವನ್ನೂ ಕೈಚೆಲ್ಲಲಿಲ್ಲ. ಆಯ್ಕೆಗೆ ಪರಿಗಣಿಸಿದ್ದ ನಾಯಕ ಸೌರವ್ ಗಂಗೂಲಿಯ ವಿಶ್ವಾಸವನ್ನೂ ಉಳಿಸಿಕೊಂಡರು. ‘ದಾದಾ’ ನಂತರ ತಂಡಕ್ಕೆ ಉಪಯುಕ್ತ ಎಡಗೈ ಬ್ಯಾಟ್ಸ್‌ಮನ್ ಆಗಿ ಬೆಳೆದರು. ತಮ್ಮದೇ ಛಾಪು ಮೂಡಿಸಿದರು.

ಅವರಿಗೆ ಟೆಸ್ಟ್‌ನಲ್ಲಿ ಅವಕಾಶ ಸಿಕ್ಕಿದ್ದು 2003ರಲ್ಲಿ, ಟ್ವೆಂಟಿ–20 ಮಾದರಿಯಲ್ಲಿ 2007ರಿಂದಲೇ ತಮ್ಮದೇ ಆದ ದಾಖಲೆಗಳನ್ನು ಬರೆದುಬಿಟ್ಟರು.

ಅವರ ಸ್ಟೈಲಿಷ್ ಬ್ಯಾಟಿಂಗ್ ಮತ್ತು ಎಡಗೈ ನಿಧಾನಗತಿಯ ಬೌಲಿಂಗ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದವು. ರಕ್ತಗತವಾಗಿ ಬಂದ ಛಲ ಮತ್ತು ಪ್ರವಾಹದ ವಿರುದ್ಧ ಈಜುವ ಮನೋಭಾವ ಅವರ ಆಟದಲ್ಲಿ ಎದ್ದು ಕಾಣುತ್ತಿತ್ತು.

ಅಭಿಮಾನಿಗಳ ಪ್ರೀತಿಯ ‘ಸಿಕ್ಸರ್ ಸಿಂಗ್’ ಯುವಿಯ ಹಲವಾರು ಛಲದ ಆಟಗಳಲ್ಲಿ ಹೆಕ್ಕಿ ತೆಗೆದ ಪ್ರಮುಖ ಅರ್ಧ ಡಜನ್ ಇನಿಂಗ್ಸ್‌ಗಳು ಇಲ್ಲಿವೆ. ಸದಾ ಕಾಲ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವಂತಹ ಪಂದ್ಯಗಳು ಅವು.

l ವರ್ಷ: 2000 l ಸ್ಥಳ: ನೈರೋಬಿ (ಕೀನ್ಯಾ) l ಸ್ಕೋರ್: 84 * ಎದುರಾಳಿ: ಆಸ್ಟ್ರೇಲಿಯಾ

ಅದು ಅವರ ಪದಾರ್ಪಣೆ ಸರಣಿಯಾಗಿತ್ತು. ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ತಂಡವು 90ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಸಚಿನ್, ಸೌರವ್, ದ್ರಾವಿಡ್ ಪೆವಿಲಿಯನ್ ಸೇರಿದ್ದರು. ಆಸ್ಟ್ರೇಲಿಯಾ ಗ್ಲೆನ್ ಮೆಕ್‌ಗ್ರಾ, ಬ್ರೆಟ್ ಲೀ ಮತ್ತು ಜೇಸನ್ ಗಿಲೆಸ್ಪಿ ಅವರ ಉರಿವೇಗದ ದಾಳಿ ರಂಗೇರಿತ್ತು. ಯುವಿಯ ಬೀಸಾಟಕ್ಕೆ ಬೌಲರ್‌ಗಳು ಬೆಂಡಾದರು. 80 ಎಸೆತಗಳಲ್ಲಿ 84 ರನ್‌ಗಳನ್ನು ಚಚ್ಚಿದರು. ಭಾರತ 50 ಓವರ್‌ಗಳಲ್ಲಿ 265 ರನ್ ಗಳಿಸಿತು. ಆಸ್ಟ್ರೇಲಿಯಾ 20 ರನ್‌ಗಳಿಂದ ಸೋತು, ಭಾರತ ಸೆಮಿಫೈನಲ್ ಪ್ರವೇಶಿಸಿತು.

l ವರ್ಷ: 2004 l ಸ್ಥಳ: ಲಾಹೋರ್, ಟೆಸ್ಟ್ ಪಂದ್ಯ l ಎದುರಾಳಿ: ಪಾಕಿಸ್ತಾನ l ಸ್ಕೋರ್: 112

ಅವತ್ತು ಗಡಾಫಿ ಕ್ರೀಡಾಂಗಣದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ನಡೆದ ಎರಡನೇ ಟೆಸ್ಟ್‌ನಲ್ಲಿ ಆತಂಕದ ಸ್ಥಿತಿಯಲ್ಲಿತ್ತು. 150 ರನ್‌ಗಳಿಗೆ ಏಳು ವಿಕೆಟ್‌ಗಳು ಪತನವಾಗಿದ್ದವು. ಆದರೆ ಬರೀ ಎರಡು ಟೆಸ್ಟ್‌ಗಳನ್ನು ಆಡಿದ್ದ ಅನುಭವಿ ಯುವರಾಜ್ ಸಿಂಗ್ ಶತಕ ಹೊಡೆದರು. ಅವರ 112 ರನ್‌ಗಳ ಗಳಿಕೆಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಪ್ರಯೋಗಿಸುವ ಶೈಲಿಯೇ ಹೆಚ್ಚಾಗಿತ್ತು. ಟೆಸ್ಟ್ ಕ್ರಿಕೆಟ್‌ಗೆ ಲಾಯಕ್ಕಲ್ಲ ಎಂದು ಕ್ರಿಕೆಟ್ ಪಂಡಿತರ ಹೇಳಿಕೆಯನ್ನು ಸುಳ್ಳು ಮಾಡಿದ ಯುವಿ ಸಂದರ್ಭಕ್ಕೆ ತಕ್ಕಂತೆ ಆಡಿದ್ದರು. ತಂಡವು 287 ರನ್‌ಗಳ ಗೌರವಾರ್ಹ ಮೊತ್ತ ಗಳಿಸಲು ಕಾರಣರಾಗಿದ್ದರು. ಇನ್ನೊಂದು ಬದಿಯಲ್ಲಿ ಅವರಿಗೆ ಇರ್ಫಾನ್ ಪಠಾಣ್ ಉತ್ತಮ ಜೊತೆ ನೀಡಿದ್ದರು.

l ವರ್ಷ: 2007 l ಸ್ಥಳ: ಡರ್ಬನ್ l ವಿಶ್ವ ಟ್ವೆಂಟಿ–20 l ಪಂದ್ಯ: ಎದುರಾಳಿ: ಇಂಗ್ಲೆಂಡ್; ಸ್ಕೋರ್ : 58

ಆ ದಿನ ಭರ್ತಿ ಬಿಸಿಯೇರಿದ್ದ ಪಂದ್ಯ ಅದು. ಇಂಗ್ಲೆಂಡ್ ಆಟಗಾರ ಆ್ಯಂಡ್ರ್ಯೂ ಫ್ಲಿಂಟಾಫ್ ಅವರು ಯುವರಾಜ್ ಸಿಂಗ್ ಅವರನ್ನು ಕೆಣಕಿದ್ದು ವೇಗಿ ಸ್ಟುವರ್ಟ್ ಬ್ರಾಡ್‌ಗೆ ಮುಳುವಾಯಿತು. ಯುವಿ ಅಭಿಮಾನಿಗಳ ಪಡೆ ಹಿರಿಹಿರಿ ಹಿಗ್ಗಿತು.

ಕಿಂಗ್ಸ್ ಮೀಡ್ ಕ್ರೀಡಾಂಗಣದ ಮೂಲೆ ಮೂಲೆಗೂ ಸಿಕ್ಸರ್ ಎತ್ತಿದರು. ಬ್ರಾಡ್ ಹಾಕಿದ 19ನೇ ಓವರ್‌ನ ಆರೂ ಎಸೆತಗಳಲ್ಲಿ ಸಿಕ್ಸರ್ ಚಚ್ಚಿ ದಾಖಲೆ ಬರೆದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಂಗ್ಲೆಂಡ್ ಬಸವಳಿಯಿತು. ಭಾರತ ಸೆಮಿಫೈನಲ್ ಪ್ರವೇಶಿಸಿತು. ಇನ್ನೊಂದು ಬದಿಯಲ್ಲಿದ್ದ ನಾಯಕ ಮಹೇಂದ್ರಸಿಂಗ್ ಧೋನಿ ಈ ಇತಿಹಾಸಕ್ಕೆ ನಿಕಟ ಸಾಕ್ಷಿಯಾಗಿದ್ದರು.

l ವರ್ಷ: 2008 l ಸ್ಥಳ: ರಾಜ್‌ಕೋಟ್ l ಏಕದಿನ ಸರಣಿಯ ಪಂದ್ಯ l ಎದುರಾಳಿ: ಇಂಗ್ಲೆಂಡ್; ಸ್ಕೋರ್: ಅಜೇಯ 138

ರಾಜ್‌ಕೋಟ್‌ನಲ್ಲಿ ಉರಿಬಿಸಿಲಿನಲ್ಲಿ ಯುವರಾಜ್ ಸಿಂಗ್ ಆಟ ರಂಗೇರಿತ್ತು. ಆದರೆ ಅವತ್ತು ಯುವಿ ಆಡುವುದೇ ಅನುಮಾನವಾಗಿತ್ತು. ಬೆನ್ನುನೋವಿನಿಂದ ಬಳಲುತ್ತಿದ್ದ ಯುವಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದು ತೋರಿದ ಶೌರ್ಯಕ್ಕೆ ಇಂಗ್ಲೆಂಡ್ ತಂಡವು ಕಂಗಾಲಾಗಿ ಹೋಯಿತು. ಅವರ 200ನೇ ಇನಿಂಗ್ಸ್ ಸ್ಮರಣೀಯವಾಯಿತು. 64 ಎಸೆತಗಳಲ್ಲಿ ಶತಕ ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರ ಒಂಬತ್ತನೇ ಶತಕ ಅದು. ಯುವಿ ಗಳಿಸಿದ ಅಜೇಯ 138 ರನ್‌ಗಳ ಬಲದಿಂದ ಭಾರತ ತಂಡವು 387 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

l ವರ್ಷ: 2011 l ಸ್ಥಳ: ಚೆನ್ನೈ l ಏಕದಿನ ವಿಶ್ವಕಪ್ ಪಂದ್ಯ l ಎದುರಾಳಿ: ವೆಸ್ಟ್ ಇಂಡೀಸ್ l ಸ್ಕೋರ್: 113

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆ ದಿನ ಯುವರಾಜ್ ಸಿಂಗ್ ಸ್ವಾಸ್ಥ್ಯ ಹದಗೆಟ್ಟಿತ್ತು. ವಿಪರೀತ ಕೆಮ್ಮು. ಅವರ ಶ್ವಾಸಕೋಶದ ಕ್ಯಾನ್ಸರ್ ಕಣಗಳ ಆಟ ಶುರುವಾಗಿದ್ದ ಲಕ್ಷಣ ಅದು. ಆದರೆ, ಯುವಿಯ ಮನೋಬಲದ ಮುಂದೆ ಯಾರು ಸಾಟಿ? ಒಂದು ಕಡೆ ವಿಕೆಟ್‌ಗಳು ಪಟಪಟನೆ ಉರುಳುತ್ತಿದ್ದವು. ವಿಂಡೀಸ್ ದಾಳಿ ತಡೆಯುವ ಯತ್ನದಲ್ಲಿ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸುತ್ತಿದ್ದರು. ಇದಾವುದನ್ನೂ ಲೆಕ್ಕಿಸದ ಯುವಿ ಶತಕ (113 ರನ್) ಬಾರಿಸಿದರು. ಭಾರತ ತಂಡವು 268 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ ಸೋತಿತು. ನಾಕೌಟ್ ಹಂತ ತಲುಪುವತ್ತ ಭಾರತ ಮತ್ತೊಂದು ದೃಢ ಹೆಜ್ಜೆ ಇಟ್ಟಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರೂ ಪ್ರಚಂಡ ಅರ್ಧಶತಕ ಬಾರಿಸಿದ್ದ ಯುವಿ ಮಿಂಚಿದ್ದರು.

l ವರ್ಷ: 2017 l ಸ್ಥಳ: ಕಟಕ್ l ಎದುರಾಳಿ: ಇಂಗ್ಲೆಂಡ್ l ಸ್ಕೋರ್: 150

ಕ್ಯಾನ್ಸರ್ ಕಾಯಿಲೆಯ ಹೋರಾಟದಲ್ಲಿ ಗೆದ್ದು ಮರಳಿದ ಯುವಿ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಲು ಹರಸಾಹಸಪಟ್ಟಿದ್ದರು. ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಅದನ್ನು ಅವರ ಕೈಚೆಲ್ಲಲಿಲ್ಲ. ಬಾರಾಬತಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಅಮೋಘ 150 ರನ್‌ಗಳನ್ನು ಗಳಿಸಿದರು. ಆ ಪಂದ್ಯದಲ್ಲಿ ತಂಡವು 3 ವಿಕೆಟ್‌ಗಳಿಗೆ 25 ರನ್ ಗಳಿಸಿದ್ದ ಸಂದರ್ಭದಲ್ಲಿ ಅವರು ಈ ಸಾಧನೆ ಮಾಡಿದ್ದರು. ಯುವಿ ಮತ್ತು ಮಹೇಂದ್ರಸಿಂಗ್ ಧೋನಿ (134) ಜೊತೆಗೂಡಿ 256 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟದಿಂದಾಗಿ ತಂಡವು 381 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ಗೆ ನೀಡಲು ಸಾಧ್ಯವಾಯಿತು. ಭಾರತ 15 ರನ್‌ಗಳಿಂದ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.