ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ತೆರೆ ಬಿದ್ದಿದೆ. ಶಾರ್ಜಾದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಬೆರಳಿಗೆ ಗಾಯಗೊಂಡಿರುವ ಅವರು ಟೂರ್ನಿಯಲ್ಲಿ ಇನ್ನು ಮುಂದೆ ಆಡುವುದಿಲ್ಲ.

ನಿತೀಶ್ ರಾಣಾ ನೀಡಿದ ನೆಲಮಟ್ಟದ ರಿಟರ್ನ್ ಕ್ಯಾಚ್ ಪಡೆಯಲು ಪ್ರಯತ್ನಿಸಿದ್ದ ಸಂದರ್ಭದಲ್ಲಿ ಅಮಿತ್ ಮಿಶ್ರಾ ಬೆರಳಿಗೆ ಗಾಯವಾಗಿತ್ತು. ನೋವು ಇದ್ದರೂ ಆ ಪಂದ್ಯದಲ್ಲಿ ಅವರು ಎರಡು ಓವರ್ಗಳನ್ನು ಮಾಡಿದ್ದರು. ಶುಭಮನ್ ಗಿಲ್ ಅವರ ವಿಕೆಟ್ ಪಡೆದಿದ್ದರು.

‘ಅಮಿತ್ ಮಿಶ್ರಾ ತಕ್ಷಣ ಭಾರತಕ್ಕೆ ಮರಳಲಿದ್ದು ಅಲ್ಲಿ ತಜ್ಞ ವೈದ್ಯರನ್ನು ಭೇಟಿಯಾಗಿ ಮುಂದಿನ ಚಿಕಿತ್ಸೆಯ ಬಗ್ಗೆ ಚರ್ಚಿಸಲಿದ್ದಾರೆ’ ಎಂದು ತಂಡದ ಪ್ರಕಟಣೆ ತಿಳಿಸಿದೆ.

‘ಅಮಿತ್ ಮಿಶ್ರಾ ಅವರ ಉಪಸ್ಥಿತಿ ತಂಡಕ್ಕೆ ಆತ್ಮವಿಶ್ವಾಸ ಮೂಡಿಸುತ್ತಿತ್ತು. ಆದರೆ ಗಾಯಗೊಂಡ ಅವರು ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡಲು ಲಭ್ಯ ಇರುವುದಿಲ್ಲ ಎಂಬುದು ಬೇಸರದ ವಿಷಯ’ ಎಂದು ತಂಡ ಹೇಳಿದೆ.

ಐಪಿಎಲ್ನ 13ನೇ ಆವೃತ್ತಿಯಲ್ಲಿ ಮಿಶ್ರಾ ಮೂರು ಪಂದ್ಯಗಳನ್ನು ಆಡಿದ್ದು ಮೂರು ವಿಕೆಟ್ ಉರುಳಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 25ಕ್ಕೆ2 ಮತ್ತು ಕೋಲ್ಕತ್ತ ವಿರುದ್ಧ 14ಕ್ಕೆ1 ವಿಕೆಟ್ ಗಳಿಸಿದ್ದಾರೆ. ಚೆನ್ನೈ ಎದುರಿನ ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ್ದಾರೆ. ಆ ಪಂದ್ಯದಲ್ಲಿ ವಿಕೆಟ್ ಗಳಿಸಲು ಸಾಧ್ಯವಾಗದೇ ಇದ್ದರೂ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಕೇವಲ 23 ರನ್ ನೀಡಿದ್ದರು.

ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ 150 ಪಂದ್ಯಗಳಲ್ಲಿ 160 ವಿಕೆಟ್ ಗಳಿಸಿದ್ದಾರೆ. ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಲು ಅವರಿಗೆ 10 ವಿಕೆಟ್ ಬೇಕಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಲಸಿತ್ ಮಾಲಿಂಗ ಈ ಬಾರಿ ಐಪಿಎಲ್ನಲ್ಲಿ ಆಡದೇ ಇರಲು ನಿರ್ಧರಿಸಿದ್ದರು.

ಭುವಿಯೂ ಔಟ್
ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ಅವರೂ ಟೂರ್ನಿಯಿಂದ ಹೊರನಡೆದಿದ್ದಾರೆ.ಅಕ್ಟೋಬರ್ 2ರಂದು ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯವ ವೇಳೆ ಅವರು ಸೊಂಟದ ಗಾಯಕ್ಕೊಳಗಾಗಿದ್ದರು.

ಭುವಿ ಈ ಬಾರಿ ಆಡಿದ್ದ 4 ಪಂದ್ಯಗಳಿಂದ ಮೂರು ವಿಕೆಟ್ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.