ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ದ್ವಿಶತಕಗಳೆಷ್ಟು? ಭಾರತೀಯರ ಸಾಧನೆಯೇನು?

Published 28 ಜೂನ್ 2024, 14:48 IST
Last Updated 28 ಜೂನ್ 2024, 14:48 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಭಾರತದ ಶೆಫಾಲಿ ವರ್ಮಾ, ಮಹಿಳೆಯರ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಗೆ ಸೇರಿಕೊಂಡರು.

ನ್ಯೂಜಿಲೆಂಡ್‌ನ ಕ್ರಿಸ್ಟಿ ಬಾಂಡ್‌ ಅವರು 1996ರಲ್ಲಿ ಮೊದಲ ಸಲ ಇನ್ನೂರು ರನ್‌ ಗಳಿಸಿ ದಾಖಲೆ ಬರೆದಿದ್ದರು. ಅದಾದ ನಂತರ 9 (ಒಟ್ಟು 10) ಬ್ಯಾಟರ್‌ಗಳು ಮಹಿಳಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದುವರೆಗೆ ದ್ವಿಶತಕದ ಗಡಿ ದಾಟಿದ್ದಾರೆ. ಈ ಪಟ್ಟಿಯಲ್ಲಿ ಭಾರತದವರಾಗಿ ಶೆಫಾಲಿ ವರ್ಮಾ ಜೊತೆಗೆ ಮಿಥಾಲಿ ರಾಜ್‌ ಸಹ ಇದ್ದಾರೆ.

ದ್ವಿಶತಕ ಸಿಡಿಸಿದ ಬ್ಯಾಟರ್‌ಗಳು
<div class="paragraphs"><p></p></div>

ಭಾರತ ಅಮೋಘ ಬ್ಯಾಟಿಂಗ್‌
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಆರಂಭವಾಗಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಬೃಹತ್‌ ಮೊತ್ತ ಕಲೆಹಾಕಿ ಮುಂದುವರಿದಿದೆ.

ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಉಪನಾಯಕಿ ಸ್ಮೃತಿ ಮಂದಾನ ಮತ್ತು ಶೆಫಾಲಿ ವರ್ಮಾ ಭದ್ರ ಅಡಿಪಾಯ ಹಾಕಿಕೊಟ್ಟರು. ಆಫ್ರಿಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಈ ಜೋಡಿ, 292 ರನ್‌ ಕಲೆಹಾಕಿತು. ಇದರೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಕಲೆಹಾಕಿದ ದಾಖಲೆ ಬರೆಯಿತು.

ಮಂದಾನ 161 ಎಸೆತಗಳಲ್ಲಿ 149 ರನ್ ಗಳಿಸಿದರೆ, 197 ಎಸೆತಗಳನ್ನು ಎದುರಿಸಿದ ಶೆಫಾಲಿ 205 ರನ್‌ ಗಳಿಸಿದರು. ಇವರಿಬ್ಬರ ಬ್ಯಾಟ್‌ನಿಂದ ಒಟ್ಟು 50 ಬೌಂಡರಿ ಹಾಗೂ 9 ಸಿಕ್ಸ್‌ ಸಿಡಿದವು.

ಸ್ಮೃತಿ, ಶೆಫಾಲಿ ವಿಕೆಟ್‌ ಪತನದ ಬಳಿಕವೂ ಭಾರತದ ಬ್ಯಾಟರ್‌ಗಳು ಸೊಗಸಾಗಿ ಬ್ಯಾಟಿಂಗ್ ಮಾಡಿದರು. ಜೆಮಿಮಾ ರಾಡ್ರಿಗಸ್‌ (55) ಅರ್ಧಶತಕ ಸಿಡಿಸಿ ಔಟಾದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (42 ರನ್‌) ಹಾಗೂ ರಿಚಾ ಘೋಷ್‌ (43) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇವರೆಲ್ಲರ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 1ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 525 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾ ಪರ ಡೆಲ್ಮಿ ಟಕ್ಕರ್‌ ಎರಡು ವಿಕೆಟ್‌ ಪಡೆದರೆ, ಎನ್‌. ಡೀ ಕರ್ಕ್‌ ಒಂದು ವಿಕೆಟ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT