ಮುಂಬೈ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್.ಸಿ.ಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸಭೆಯು ಗುರುವಾರ ಇಲ್ಲಿ ನಡೆಯಿತು.

ಬಿಸಿಸಿಐ ಮುಖ್ಯ ಕಚೇರಿಗೆ ಮಧ್ಯಾಹ್ನ 12 ಗಂಟೆಗೆ ಪ್ರವೇಶಿಸಿದ ರಾಹುಲ್ ದ್ರಾವಿಡ್ ಸಂಜೆ ಐದರವರೆಗೆ ಗಂಗೂಲಿ ಅವರೊಂದಿಗೆ ಸಭೆ ನಡೆಸಿದರು. ಅಧ್ಯಕ್ಷರ ಕೋಣೆಯ ಸಮೀಪ ಕಾದು ಕುಳಿತಿದ್ದ ಮಾಧ್ಯಮದವರಿದ್ದರು. ರಾಹುಲ್ ಅವರು ನಿರ್ಗಮಿಸುವ ಸಂದರ್ಭದಲ್ಲಿ ಪತ್ರಕರ್ತರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಗಂಗೂಲಿ, ಎನ್ಸಿಎ ಕುರಿತು ಸಾಮಾನ್ಯ ವಿಷಯಗಳ ಕುರಿತು ಮಾತನಾಡಿದ್ದೇವೆ. ಅಂತಹ ದೊಡ್ಡ ವಿಶೇಷವೆನೂ ಇಲ್ಲ ಎಂದರು. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ರಚನೆಯ ಕುರಿತೂ ಗಂಗೂಲಿ ಪ್ರತಿಕ್ರಿಯಿಸಲಿಲ್ಲ.

ಜಸ್ಪ್ರೀತ್ ಬೂಮ್ರಾ ಅವರ ಫಿಟ್ನೆಸ್ ಟೆಸ್ಟ್ ಮಾಡಲು ಎನ್ಸಿಎನಲ್ಲಿ ನಿರಾಕರಿಸಲಾಗಿತ್ತೆಂದು ವರದಿಯಾಗಿತ್ತು. ಅಲ್ಲದೇ ಗಾಯಾಳುಗಳ ನಿರ್ವಹಣೆ ವಿಷಯದಲ್ಲಿ ಕೆಲವು ಗೊಂದಲಗಳು ಮೂಡಿದ್ದವು. ಆದ್ದರಿಂದ ಗಂಗೂಲಿ ಮತ್ತು ದ್ರಾವಿಡ್ ಅವರ ಭೇಟಿಯು ಕುತೂಹಲ ಕೆರಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.