ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ‘ಎ’ ತಂಡಕ್ಕೆ ಮಣಿದ ‘ಡಿ’ ತಂಡ: ಮುಲಾನಿ, ತನುಷ್ ದಾಳಿಗೆ ಒಲಿದ ಜಯ

Published : 15 ಸೆಪ್ಟೆಂಬರ್ 2024, 15:27 IST
Last Updated : 15 ಸೆಪ್ಟೆಂಬರ್ 2024, 15:27 IST
ಫಾಲೋ ಮಾಡಿ
Comments

ಅನಂತಪುರ: ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಎ ತಂಡವು ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಡಿ ತಂಡದ ವಿರುದ್ಧ 186 ರನ್‌ಗಳಿಂದ ಜಯಿಸಿತು. 

488 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡಿ ತಂಡವು 82.2 ಓವರ್‌ಗಳಲ್ಲಿ 301 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಶನಿವಾರ 44 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಡಿ ತಂಡದ ರಿಕಿ ಭುಯ್ ಅವರು ಪಂದ್ಯದ ನಾಲ್ಕನೇ ದಿನವಾದ ಭಾನುವಾರ (113; 195ಎ, 4X14, 6X3) ಶತಕ ಗಳಿಸಿದರು. ಇದರಿಂದಾಗಿ ಎ ತಂಡಕ್ಕೆ ಜಯ ಒಲಿಯುವುದು ಸ್ವಲ್ಪ ವಿಳಂಬವಾಯಿತು. ಈ ಜಯದೊಂದಿಗೆ ಎ ತಂಡವು 6 ಅಂಕ ಗಳಿಸಿತು. ಇದರೊಂದಿಗೆ ಪ್ರಶಸ್ತಿ ಜಯಿಸುವ ತಂಡದ ಆಸೆಯು ಜೀವಂತವಾಗುಳಿಯಿತು. ಭಾರತ ಸಿ ತಂಡವು 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 

ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಎ ತಂಡದ ಶಮ್ಸ್‌ ಮುಲಾನಿ, ಎರಡನೇ  ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ (117ಕ್ಕೆ3) ಮಿಂಚಿದರು. ಅವರೊಂದಿಗೆ ತನುಷ್ ಕೋಟ್ಯಾನ್ (73ಕ್ಕೆ4) ಕೂಡ ಪರಿಣಾಮಕಾರಿ ದಾಳಿ ನಡೆಸಿದರು. 

ಪಂದ್ಯ ಡ್ರಾ: ಭಾರತ ಬಿ ಮತ್ತು ಸಿ ತಂಡಗಳ ನಡುವಣ ಪಂದ್ಯವು ಡ್ರಾ ಅಯಿತು. 

ಸಿ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 525 ರನ್‌ಗಳಿಗೆ ಉತ್ತರವಾಗಿ ಬಿ ತಂಡವು 332 ರನ್ ಗಳಿಸಿತ್ತು. ಸಿ ತಂಡದ ಅನ್ಷುಲ್ ಕಾಂಬೋಜ್ (69ಕ್ಕೆ8) ಅವರ ಬೌಲಿಂಗ್ ಮುಂದೆ ತಂಡವು ಕುಸಿಯಿತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 84.3 ಓವರ್‌ಗಳಲ್ಲಿ 290. ಭಾರತ ಡಿ: 52.1 ಓವರ್‌ಗಳಲ್ಲಿ 183. ಎರಡನೇ ಇನಿಂಗ್ಸ್: ಭಾರತ ಎ: 98 ಓವರ್‌ಗಳಲ್ಲಿ 3ಕ್ಕೆ380 ಡಿಕ್ಲೇರ್ಡ್. ಭಾರತ ಡಿ: 82. 2 ಓವರ್‌ಗಳಲ್ಲಿ 301 (ಯಶ್ ದುಬೆ 37, ರಿಕಿ ಭುಯ್ 113, ಶ್ರೇಯಸ್ ಅಯ್ಯರ್ 41, ಸಂಜು ಸ್ಯಾಮ್ಸನ್ 40, ಸೌರಭ್ ಕುಮಾರ್ 22, ಹರ್ಷಿತ್ ರಾಣಾ 24, ಶಮ್ಸ್ ಮುಲಾನಿ 117ಕ್ಕೆ3, ತನುಷ್ ಕೋಟ್ಯಾನ್ 73ಕ್ಕೆ4) ಫಲಿತಾಂಶ: ಭಾರತ ಎ ತಂಡಕ್ಕೆ 186 ರನ್‌ಗಳ ಜಯ. ಪಂದ್ಯದ ಆಟಗಾರ: ಶಮ್ಸ್‌ ಮುಲಾನಿ. 

ಎರಡನೇ ಪಂದ್ಯ: ಮೊದಲ ಇನಿಂಗ್ಸ್: ಭಾರತ ಸಿ: 124.1 ಓವರ್‌ಗಳಲ್ಲಿ 525. ಭಾರತ ಬಿ: 108 ಓವರ್‌ಗಳಲ್ಲಿ 332. ಎರಡನೇ ಇನಿಂಗ್ಸ್: 37 ಓವರ್‌ಗಳಲ್ಲಿ 4ಕ್ಕೆ128 ಡಿಕ್ಲೇರ್ಡ್: ಋತುರಾಜ್ ಗಾಯಕವಾಡ 62, ರಜತ್ ಪಾಟೀದಾರ್ 42, ರಾಹುಲ್ ಚಾಹರ್ 8ಕ್ಕೆ2) ಫಲಿತಾಂಶ : ಪಂದ್ಯ ಡ್ರಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT