ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ | ಭಾರತ ಸಿ ತಂಡಕ್ಕೆ ಶಮ್ಸ್ ಮುಲಾನಿ ಆಸರೆ

ವಿದ್ವತ್ ಕಾವೇರಪ್ಪಗೆ ಎರಡು ವಿಕೆಟ್
Published : 12 ಸೆಪ್ಟೆಂಬರ್ 2024, 14:01 IST
Last Updated : 12 ಸೆಪ್ಟೆಂಬರ್ 2024, 14:01 IST
ಫಾಲೋ ಮಾಡಿ
Comments

ಅನಂತಪುರ: ಬೌಲಿಂಗ್ ಆಲ್‌ರೌಂಡರ್ ಶಮ್ಸ್ ಮುಲಾನಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ  ಶತಕ ದಾಖಲಿಸುವತ್ತ ಚಿತ್ತ ನೆಟ್ಟಿದ್ದಾರೆ. ಅಲ್ಲದೇ ತಮ್ಮ ಚೆಂದದ ಬ್ಯಾಟಿಂಗ್ ಮೂಲಕ ಭಾರತ ಸಿ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. 

ಗುರುವಾರ ಇಲ್ಲಿ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ  ಭಾರತ ಡಿ ತಂಡದ ವಿರುದ್ಧ ಮಯಂಕ್ ಅಗರವಾಲ್ ನಾಯಕತ್ವದ ಎ ತಂಡವು 93 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಮುಲಾನಿ (ಬ್ಯಾಟಿಂಗ್ 88; 174ಎಸೆತ) ಅವರು ತನುಷ್ ಕೋಟ್ಯಾನ್ (53; 80ಎ) ಅವರೊಂದಿಗಿನ  7ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಗಳಿಸಿದರು. ಇದರಿಂದಾಗಿ ತಂಡವು ದಿನದಾಟದ ಕೊನೆಗೆ 82 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 288 ರನ್ ಗಳಿಸಿತು. 

ಮುಲಾನಿ ತಾಳ್ಮೆಯಿಂದ ಆಡಿದರೆ, ತನುಷ್ ಅವರು ತುಸು ವೇಗವಾಗಿ ರನ್ ಕಲೆ ಹಾಕಿದರು. ಮುಂಬೈನ ಈ ಇಬ್ಬರೂ ಬ್ಯಾಟರ್‌ಗಳ ಉತ್ತಮ ಹೊಂದಾಣಿಕೆಯ ಆಟದಿಂದಾಗಿ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಾಯಿತು. 

ಟಾಸ್ ಗೆದ್ದ ಭಾರತ ಡಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಹಂತದಲ್ಲಿ ಬೌಲರ್‌ಗಳು ಮಿಂಚಿದರು. ಈ ತಂಡದಲ್ಲಿರುವ ಕನ್ನಡಿಗ ವಿದ್ವತ್ ಕಾವೇರಪ್ಪ, ಹರ್ಷಿತ್ ರಾಣಾ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಸಾರಾಂಶ್ ಜೈನ್ ಮತ್ತು ಸೌರಭ್ ಕುಮಾರ್ ಅವರೂ ತಲಾ ಒಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರು:

ಭಾರತ ಎ: 82 ಓವರ್‌ಗಳಲ್ಲಿ 8ಕ್ಕೆ 288 (ರಿಯಾನ್ ಪರಾಗ್ 37, ಕುಮಾರ್ ಕುಶಾಗ್ರ 28, ಶಮ್ಸ್‌ ಮುಲಾನಿ ಬ್ಯಾಟಿಂಗ್  88, ಹರ್ಷಿತ್ ರಾಣಾ 49ಕ್ಕೆ2, ವಿದ್ವತ್ ಕಾವೇರಪ್ಪ 30ಕ್ಕೆ2, ಅರ್ಷದೀಪ್ ಸಿಂಗ್ 73ಕ್ಕೆ2) ವಿರುದ್ಧ ಭಾರತ ಡಿ. 

ಇಶಾನ್ ಕಿಶನ್ ಶತಕದ ಭರಾಟೆ

ದೀರ್ಘ ಸಮಯದ ನಂತರ ದೇಶಿ ಕ್ರಿಕೆಟ್‌ಗೆ ಮರಳಿರುವ ಇಶಾನ್ ಕಿಶನ್ ಶತಕ ದಾಖಲಿಸಿದರು. ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಇಶಾನ್ (111; 126ಎಸೆತ) ಚೆಂದದ ಬ್ಯಾಟಿಂಗ್ ಬಲದಿಂದ ಭಾರತ ಸಿ ತಂಡವು ಬಿ ತಂಡದ ವಿರುದ್ಧ 79 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 357 ರನ್ ಗಳಿಸಿತು.  ಆರಂಭಿಕ ಬ್ಯಾಟರ್ ಮತ್ತು ನಾಯಕ ಋತುರಾಜ್ ಗಾಯಕವಾಡ್ (ಬ್ಯಾಟಿಂಗ್ 46; 50ಎ) ಮತ್ತು ಮಾನವ್ ಸುತಾರ್ (ಬ್ಯಾಟಿಂಗ್ 8) ಅವರು ಕ್ರೀಸ್‌ನಲ್ಲಿದ್ದಾರೆ.

ಎಡಗೈ ಬ್ಯಾಟರ್ ಇಶಾನ್ ಅವರು ಈಚೆಗೆ ತಮಿಳನಾಡಿನಲ್ಲಿ ನಡೆದ ಬುಚಿಬಾಬು ಆಹ್ವಾನಿತ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದರಿಂದಾಗಿ ಜಾರ್ಖಂಡ್ ತಂಡ ಜಯಿಸಿತ್ತು. 2023ರ ಜುಲೈ ನಂತರ ಇಶಾನ್ ಆಡಿದ ಮೊದಲ ದೀರ್ಘ ಮಾದರಿ ಪಂದ್ಯ ಅದಾಗಿತ್ತು. 

ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಎರಡನೇ ಹಣಾಹಣಿಯಲ್ಲಿ ಇಶಾನ್ ಮತ್ತು ಬಾಬಾ ಇಂದ್ರಜೀತ್ (78; 136ಎ) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 189 ರನ್ ಸೇರಿಸಿದರು. ಭಾರತ ಸಿ: 79 ಓವರ್‌ಗಳಲ್ಲಿ 5ಕ್ಕೆ357 (ಋತುರಾಜ್ ಗಾಯಕವಾಡ 46 ಸಾಯಿ ಸುದರ್ಶನ್ 43 ರಜತ್ ಪಾಟೀದಾರ್ 40 ಇಶಾನ್ ಕಿಶನ್ 111 ಬಾಬಾ ಇಂದ್ರಜೀತ್ 78 ಮುಕೇಶ್ ಕುಮಾರ್ 76ಕ್ಕೆ3) ವಿರುದ್ಧ ಭಾರತ ಬಿ.

ಇಶಾನ್ ಕಿಶನ್
ಇಶಾನ್ ಕಿಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT