ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸ್ತುಸಂಗ್ರಹಾಲಯದಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಸರ್ ಎವರ್ಟನ್ ವೀಕ್ಸ್ ಅವರ ಗೌರವಾರ್ಥ ಪ್ರಮುಖ ಸ್ಥಾನ ನೀಡಲಾಗುವುದು ಎಂದು ಬಂಗಾಳ ಕ್ರಿಕಟ್ ಸಂಸ್ಥೆ ಹೇಳಿದೆ.

ಎವರ್ಟನ್ ಅವರು ಬುಧವಾರ ನಿಧನರಾದರು ಅವರಿಗೆ 95 ವರ್ಷವಾಗಿತ್ತು. 1948ರಲ್ಲಿ ಭಾರತದ ಪ್ರವಾಸ ಮಾಡಿದ್ದ ವಿಂಡೀಸ್ ತಂಡದಲ್ಲಿ ಎವರ್ಟನ್ ಆಡಿದ್ದರು. ಅವರು ಆ ಸರಣಿಯ ಟೆಸ್ಟ್ ಪಂದ್ಯವು ಈಡನ್ ಗಾರ್ಡನ್‌ನಲ್ಲಿ ನಡೆದಿತ್ತು. ಅದರ ಎರಡೂ ಇನಿಂಗ್ಸ್‌ಗಳಲ್ಲಿ ಎವರ್ಟನ್ ಶತಕ ದಾಖಲಿಸಿದ್ದರು.

’ಕ್ರಿಕೆಟ್ ಕ್ಷೇತ್ರದಲ್ಲಿ ಎವರ್ಟನ್ ಅವರು ಬಹುದೊಡ್ಡ ವ್ಯಕ್ತಿ. ಈಡನ್ ಗಾರ್ಡನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಹೊಡೆದ ಮೊದಲ ಕ್ರಿಕೆಟಿಗರಾಗಿ ಎವರ್ಟನ್ ನಮ್ಮ ಮನದಲ್ಲಿ ಸದಾ ಉಳಿಯುತ್ತಾರೆ‘ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ಗುರುವಾರ ಹೇಳಿದ್ದಾರೆ.

’ಇಲ್ಲಿ ನಾವು ನಿರ್ಮಿಸಲಿರುವ ವಸ್ತು ಸಂಗ್ರಹಾಲಯದಲ್ಲಿ ವೀಕ್ಸ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಆದ್ಯತೆ ನೀಡುತ್ತೇವೆ. ಕೊರೊನಾ ವೈರಸ್ ಪ್ರಸರಣದಿಂದಾಗಿ ಲಾಕ್‌ಡೌನ್ ಇದ್ದ ಕಾರಣ ಸಂಗ್ರಹಾಲಯದ ನಿರ್ಮಾಣ ಕಾಮಗಾರಿ ಆರಂಭವಾಗುವುದು ತಡವಾಗುತ್ತಿದೆ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.