ರಾಂಚಿ: ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಹಂಬಲ ಹೊಂದಿರುವ ಹೆಣ್ಣು ಮಕ್ಕಳಿಗೆ, ಪೋಷಕರು ಪ್ರೋತ್ಸಾಹಿಸಬೇಕು. ಆ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒತ್ತಾಯಿಸಿದ್ದಾರೆ.

ಯುವ ಹಾಗೂ ಸಚಿನ್ ತೆಂಡೂಲ್ಕರ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಹೆಣ್ಣು ಮಕ್ಕಳಿಗೆ ಫುಟ್ಬಾಲ್ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಇಚ್ಛಾಶಕ್ತಿಯು ಹೆಚ್ಚಾಗಿರುತ್ತದೆ. ಅವರು ಮಾಡುವ ಕೆಲಸವನ್ನು ಶ್ರಮವಹಿಸಿ ಹಾಗೂ ಇಷ್ಟಪಟ್ಟು ಮಾಡುತ್ತಾರೆ. ನನಗೂ ನನ್ನ ಬಾಲ್ಯದ ದಿನಗಳೂ ನೆನಪಾಯಿತು‘ ಎಂದು ಸಚಿನ್ ಹೇಳಿದ್ದಾರೆ.

‘ನಾನು ಸಹ ಅನೇಕ ಮಕ್ಕಳಿಂದ ಸ್ಫೂರ್ತಿ ಪಡೆದಿದ್ದೇನೆ. ಹೆಣ್ಣು ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಕುಟುಂಬದವರು ನಿರಾಕರಿಸುತ್ತಾರೆ. ಮನೆಯಿಂದಲೇ ವಿರೋಧ ವ್ಯಕ್ತವಾದಾಗ ಅವರಿಗೆ ಹೆಚ್ಚು ನೋವುಂಟಾಗುತ್ತದೆ. ಪೋಷಕರು ಹೆಣ್ಣು ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿ, ಬೆಂಬಲಿಸಬೇಕು. ಅವರು ತಮ್ಮ ಸಾಧನೆಯ ಮೂಲಕ ನಿಮ್ಮ( ಪೋಷಕರು) ಮುಖದಲ್ಲಿ ನಗು ಮೂಡಿಸುತ್ತಾರೆ‘ಎಂದು ಸಚಿನ್ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಫೌಂಡೇಶನ್ ಕುರಿತು ಮಾತನಾಡಿದ ಸಚಿನ್, ಇದು ಶಿಕ್ಷಣ, ಕ್ರೀಡೆ ಮತ್ತು ಆರೋಗ್ಯ ಎಂಬ ಮೂರು ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ

‘ತಂದೆ ಪ್ರಾಧ್ಯಾಪಕರಾಗಿದ್ದರಿಂದ ಶಿಕ್ಷಣ, ಪತ್ನಿ ವೈದ್ಯೆಯಾಗಿರುವ ಕಾರಣ ಆರೋಗ್ಯ, ನಾನು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಕ್ರೀಡೆ. ಈ ಮೂರು ವಿಷಯಗಳು ದೇಶದ ಭವಿಷ್ಯ ರೂಪಿಸಬಲ್ಲ ಅಂಶಗಳು‘ ಎಂದು ಸಚಿನ್ ತಿಳಿಸಿದ್ದಾರೆ.

ಯುವ ಫೌಂಡೇಷನ್ ಅನ್ನು ಶಾಘ್ಲಿಸಿದ ಅವರು, ಮಕ್ಕಳೊಂದಿಗೆ ಕಾಲ ಕಳೆಯುವುದುಕ್ಕೆ ಹೆಚ್ಚು ಇಷ್ಟಪಡುತ್ತೇನೆ ಎಂದು ಸಂತಸ ಹಂಚಿಕೊಂಡರು.

ಈ ವೇಳೆ ಅವರೊಂದಿಗೆ ಪತ್ನಿ ಅಂಜಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.