ಆಮ್ಸ್ಟೆಲ್ವೀನ್ (ನೆದರ್ಲೆಂಡ್ಸ್): ಆತಿಥೇಯನೆದರ್ಲೆಂಡ್ಸ್ ವಿರುದ್ಧದ ಏಕದಿನಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬರೋಬ್ಬರಿ 498 ರನ್ ಗಳಿಸುವ ಮೂಲಕ, ಈ ಮಾದರಿಯ ಪಂದ್ಯದ ಇನಿಂಗ್ಸ್ವೊಂದರಲ್ಲಿ ಅತಿಹೆಚ್ಚು ಮೊತ್ತ ಕಲೆಹಾಕಿದ ಸಾಧನೆ ಮಾಡಿದೆ.
ಆಮ್ಸ್ಟೆಲ್ವೀನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಪರಫಿಲ್ ಸಾಲ್ಟ್ (93 ಎಸೆತ, 122ರನ್),ಡೇವಿಡ್ ಮಲಾನ್ (109 ಎಸೆತ, 125ರನ್) ಹಾಗೂಜೋಸ್ ಬಟ್ಲರ್ (70 ಎಸೆತ, ಅಜೇಯ 162ರನ್) ಅಮೋಘ ಶತಕ ಸಿಡಿಸಿ ಮಿಂಚಿದರು. ಕೊನೆಯಲ್ಲಿಲಿಯಾಮ್ ಲಿವಿಂಗ್ಸ್ಟೋನ್ (22 ಎಸೆತ, ಅಜೇಯ 66ರನ್) ಬಿರುಸಿನ ಅರ್ಧಶತಕ ಬಾರಿಸಿದರು.
ಹೀಗಾಗಿ ವಿಶ್ವ ದಾಖಲೆಯ ಮೊತ್ತ ಕಲೆಹಾಕಲು ಇಂಗ್ಲೆಂಡ್ಗೆ ಸಾಧ್ಯವಾಯಿತು.
ಇದನ್ನೂ ಓದಿ:ಏಕದಿನ ಕ್ರಿಕೆಟ್ನಲ್ಲಿ 498 ರನ್: ಇಂಗ್ಲೆಂಡ್ ವಿಶ್ವದಾಖಲೆ
ಈ ಮೊತ್ತದೆದುರು ತಿಣುಕಾಡಿದ ನೆದರ್ಲೆಂಡ್ಸ್ 49.4 ಓವರ್ಗಳಲ್ಲಿ 266 ರನ್ ಗಳಿಸಿ ಆಲೌಟ್ ಆಯಿತು. ಮೋಯಿನ್ ಅಲಿ ಮೂರು ಮತ್ತು ಮಲಾನ್ 1 ವಿಕೆಟ್ ಕಿತ್ತರೆ, ಡೇವಿಡ್ ವಿಲ್ಲಿ, ರೀಸ್ ಟಾಪ್ಲೆ, ಸ್ಯಾಮ್ ಕರನ್ ತಲಾ ಎರಡು ವಿಕೆಟ್ ಹಂಚಿಕೊಂಡರು. ಹೀಗಾಗಿ ಎಯಾನ್ ಮಾರ್ಗನ್ ಪಡೆ 232ರನ್ ಅಂತರದ ಜಯ ಸಾಧಿಸಿತು.
ಈ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳು
ಇನಿಂಗ್ಸ್ನಲ್ಲಿ ಗರಿಷ್ಠ ರನ್
ಇಂಗ್ಲೆಂಡ್ ತಂಡ 498 ರನ್ ಕಲೆಹಾಕುವುದರೊಂದಿಗೆ, ಏಕದಿನ ಕ್ರಿಕೆಟ್ ಪಂದ್ಯದ ಇನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿತು.
ಪುರುಷರ ಕ್ರಿಕೆಟ್ನಲ್ಲಿಅತಿಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನಗಳೂ ಇಂಗ್ಲೆಂಡ್ ತಂಡದ ಹೆಸರಲ್ಲೇ ಇವೆ. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗೆ 481 ರನ್ ಮತ್ತು 2016ರಲ್ಲಿ ಪಾಕಿಸ್ತಾನದ ವಿರುದ್ಧ 3 ವಿಕೆಟ್ಗೆ 444 ರನ್ ಕಲೆಹಾಕಿತ್ತು.
ನಂತರದ ಸ್ಥಾನದಲ್ಲಿ ಶ್ರೀಲಂಕಾ ಇದೆ. ಲಂಕಾ ಪಡೆ 2006ರಲ್ಲಿ ನೆದರ್ಲೆಂಡ್ಸ್ ವಿರುದ್ಧವೇ 9 ವಿಕೆಟ್ಗೆ 443 ರನ್ ಗಳಿಸಿತ್ತು.
ನ್ಯೂಜಿಲೆಂಡ್ ಮಹಿಳಾ ತಂಡ ಐರ್ಲೆಂಡ್ ವಿರುದ್ಧ 4 ವಿಕೆಟ್ಗೆ 491ರನ್ ಗಳಿಸಿತ್ತು. ಇದು ಮಹಿಳಾ ಕ್ರಿಕೆಟ್ನಲ್ಲಿ ದಾಖಲೆಯಾಗಿದೆ.
ಐದನೇ ಬಾರಿ 400+ ರನ್ ಗಳಿಸಿದಇಂಗ್ಲೆಂಡ್
ಏಕದಿನ ಕ್ರಿಕೆಟ್ನಇನಿಂಗ್ಸ್ವೊಂದರಲ್ಲಿ ವಿವಿಧ ತಂಡಗಳು ಇದುವರೆಗೆ ಒಟ್ಟು 21 ಬಾರಿ 400ಕ್ಕಿಂತ ಹೆಚ್ಚು ರನ್ ಗಳಿಸಿವೆ. ಈ ಪೈಕಿ ದಕ್ಷಿಣ ಆಫ್ರಿಕಾ ಅತಿಹೆಚ್ಚು (6) ಸಲ ಈ ಸಾಧನೆ ಮಾಡಿದೆ.
ಉಳಿದಂತೆ, ಇಂಗ್ಲೆಂಡ್ ಮತ್ತು ಭಾರತ ತಲಾ ಐದು ಬಾರಿ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಲಾ 2 ಬಾರಿ ಇಷ್ಟು ರನ್ ಗಳಿಸಿವೆ. ನ್ಯೂಜಿಲೆಂಡ್ ತಂಡ ಒಂದು ಸಲ400ಕ್ಕಿಂತ ಹೆಚ್ಚು ರನ್ ಗಳಿಸಿತ್ತು.
ಇನಿಂಗ್ಸ್ವೊಂದರಲ್ಲಿ ಅತಿಹೆಚ್ಚು ಸಿಕ್ಸರ್
ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು 26 ಸಿಕ್ಸರ್ಗಳನ್ನು ಸಿಡಿಸಿದರು. ಇದುಏಕದಿನ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಯಾವುದೇ ತಂಡ ಬಾರಿಸಿದ ಅತಿಹೆಚ್ಚು ಸಿಕ್ಸರ್ಗಳಾಗಿವೆ.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾಸ್ ಬಟ್ಲರ್ 14,ಲಿಯಾಮ್ ಲಿವಿಂಗ್ಸ್ಟೋನ್ 6 ಸಿಕ್ಸರ್ ಚಚ್ಚಿದರೆ,ಫಿಲ್ ಸಾಲ್ಟ್ ಹಾಗೂ ಡೇವಿಡ್ ಮಲಾನ್ ತಲಾ ಮೂರು ಸಿಕ್ಸರ್ ಬಾರಿಸಿದರು.
2019ರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರೇ 25 ಸಿಕ್ಸರ್ ಹೊಡೆದಿದ್ದದ್ದು ಈವರೆಗೆ ದಾಖಲೆಯಾಗಿತ್ತು.
ನೆದರ್ಲೆಂಡ್ಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದ ಆಂಗ್ಲರು, 36 ಬೌಂಡರಿ ಹಾಗೂ 26 ಸಿಕ್ಸರ್ಗಳನ್ನು ಚಚ್ಚಿದರು. ಇದರೊಂದಿಗೆ ಬರೋಬ್ಬರಿ 300 ರನ್ಗಳನ್ನು ಬೌಂಡರಿ ಮತ್ತು ಸಿಕ್ಸರ್ ಮೂಲಕವೇ ದೋಚಿದರು. ಇದುವರೆಗೆ ಇಂತಹ ಸಾಧನೆ ಯಾವುದೇ ತಂಡದಿಂದ ಸಾಧ್ಯವಾಗಿರಲಿಲ್ಲ.
ಮೂರನೇ ಬಾರಿ ಮೂವರು ಬ್ಯಾಟರ್ಗಳ ಶತಕ
ಏಕದಿನ ಕ್ರಿಕೆಟ್ನಲ್ಲಿ ಈವರೆಗೆ ಮೂರು ಬಾರಿ ಮಾತ್ರವೇಇನಿಂಗ್ಸ್ವೊಂದರಲ್ಲಿ ಒಂದೇ ತಂಡದ ಮೂವರು ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಬಟ್ಲರ್,ಸಾಲ್ಟ್ ಹಾಗೂ ಮಲಾನ್ ಶತಕ ಸಿಡಿಸಿದರು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳು 2015ರಲ್ಲಿ ಎರಡು ಬಾರಿ (ವೆಸ್ಟ್ ಇಂಡೀಸ್ ಮತ್ತು ಭಾರತ ವಿರುದ್ಧ) ಈ ಸಾಧನೆ ಮಾಡಿದ್ದರು.
ಕೊನೇ ಹತ್ತು ಓವರ್ಗಳಲ್ಲಿ 164 ರನ್
40 ಓವರ್ಗಳ ಆಟ ಮುಗಿದಾಗ ಇಂಗ್ಲೆಂಡ್ ತಂಡ2 ವಿಕೆಟ್ಗೆ 334ರನ್ ಗಳಿಸಿತ್ತು. ಕೊನೆಯ ಹತ್ತು ಓವರ್ಗಳಲ್ಲಿ ಅಕ್ಷರಶಃ ಅಬ್ಬರಿಸಿದ ಬಟ್ಲರ್, ಮಲಾನ್ ಮತ್ತು ಲಿವಿಂಗ್ಸ್ಟೋನ್ 8 ಬೌಂಡರಿ ಹಾಗೂ 15 ಸಿಕ್ಸರ್ ಸಹಿತ164 ರನ್ ಚಚ್ಚಿದರು.
2015ರಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿಕೊನೇ ಹತ್ತು ಓವರ್ಗಳಲ್ಲಿ 163 ರನ್ ಗಳಿಸಿದ್ದದ್ದು, ಈವರೆಗೆ ದಾಖಲೆಯಾಗಿತ್ತು.
ವಿಶಿಷ್ಟ ಸಾಧನೆ ಮಾಡಿದ ಬಟ್ಲರ್
ನೆದರ್ಲೆಂಡ್ಸ್ ವಿರುದ್ಧ ಬಟ್ಲರ್ ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರೊಂದಿಗೆ ಅವರುಏಕದಿನ ಕ್ರಿಕೆಟ್ನಲ್ಲಿ ಮೂರು ಬಾರಿ 50 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ನೂರು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾದರು.
2015ರಲ್ಲಿ ಪಾಕಿಸ್ತಾನ ವಿರುದ್ಧ 46 ಎಸೆತಗಳಲ್ಲಿ ಮೂರಂಕಿ ದಾಟಿದ್ದ ಅವರು, 2019ರಲ್ಲಿಯೂ ಪಾಕ್ ವಿರುದ್ಧವೇ 50 ಎಸೆತಗಳಲ್ಲಿ ನೂರು ರನ್ ಗಳಿಸಿದ್ದರು.
ಎರಡನೇ ವೇಗದ 150 ರನ್
ಬಟ್ಲರ್ ಈ ಇನಿಂಗ್ಸ್ನಲ್ಲಿ ತಾವೆದುರಿಸಿದ 65ನೇ ಎಸೆತದಲ್ಲಿ150ನೇ ರನ್ ಸಿಡಿಸಿದರು. ಏಕದಿನ ಕ್ರಿಕೆಟ್ನಲ್ಲಿ ಈ ಮೊದಲು (2015) ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್, ವೆಸ್ಟ್ ಇಂಡೀಸ್ ವಿರುದ್ಧ 64 ಎಸೆತಗಳಲ್ಲಿ 150 ರನ್ ಗಳಿಸಿದ್ದರು. ಅದು ಸದ್ಯ ದಾಖಲೆಯಾಗಿದೆ.
ಕೇವಲ 22 ಎಸೆತಗಳಲ್ಲಿ 66 ರನ್ ಬಾರಿಸಿ, ಇಂಗ್ಲೆಂಡ್ ತಂಡವು ವಿಶ್ವದಾಖಲೆಯ ಮೊತ್ತ ಕಲೆಹಾಕಲು ನೆರವಾದ ಲಿಯಾಮ್ಲಿವಿಂಗ್ಸ್ಟೋನ್ 17ನೇ ಎಸೆತದಲ್ಲಿ ಅರ್ಧಶತಕದ ಗಡಿ ದಾಟಿದರು. ಇದು ಇಂಗ್ಲೆಂಡ್ ಪರ ವೇಗದ ಅರ್ಧಶತಕವೆನಿಸಿತು. 2020ರಲ್ಲಿ ಐರ್ಲೆಂಡ್ ವಿರುದ್ಧ ಜಾನಿ ಬೆಸ್ಟೋ ಅವರೂ ಇಷ್ಟೇ (17) ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿ ವಿಲಿಯರ್ಸ್ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವುದು ಸದ್ಯ ಏಕದಿನ ಕ್ರಿಕೆಟ್ನ ವೇಗದ ಅರ್ಧಶತಕ ಎನಿಸಿದೆ.
ಫಿಲಿಪ್ ಬಾಯ್ಸ್ವೇಯ್ನ್ ಹೆಸರಿಗೆ ಕೆಟ್ಟ ದಾಖಲೆ
ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಪರ 10 ಓವರ್ ಬೌಲಿಂಗ್ ಮಾಡಿದ ಫಿಲಿಪ್ ಬಾಯ್ಸ್ವೇಯ್ನ್108 ರನ್ ನೀಡಿದರು.ಏಕದಿನ ಕ್ರಿಕೆಟ್ನಲ್ಲಿಈ ತಂಡದ ಪರ ಈವರೆಗೆ ಯಾವೊಬ್ಬ ಬೌಲರ್ 100ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿರಲಿಲ್ಲ.
ಅಷ್ಟಲ್ಲದೆ,ಏಕದಿನ ಕ್ರಿಕೆಟ್ನಲ್ಲಿ ಇದು (108 ರನ್) ಲೆಗ್ ಸ್ಪಿನ್ನರ್ವೊಬ್ಬರು ಚಚ್ಚಿಸಿಕೊಂಡ ಎರಡನೇ ಹೆಚ್ಚು ರನ್ ಎನಿಸಿತು. 2019ರಲ್ಲಿ ಅಫ್ಗಾನಿಸ್ತಾನದ ರಶೀದ್ ಖಾನ್, ಇಂಗ್ಲೆಂಡ್ ವಿರುದ್ಧವೇ 110 ರನ್ ಬಿಟ್ಟುಕೊಟ್ಟಿದ್ದರು.
ಮೊದಲ 9 ಓವರ್ಗಳಲ್ಲಿ 76ರನ್ ಬಿಟ್ಟುಕೊಟ್ಟಿದ್ದ ಬಾಯ್ಸ್ವೇಯ್ನ್, ತಮ್ಮ ಕೊನೇ ಓವರ್ನಲ್ಲಿ ದುಬಾರಿಯಾದರು. ಫಿಲಿಪ್ ಎಸೆದ ಹತ್ತನೇ ಹಾಗೂ ಇನಿಂಗ್ಸ್ 46ನೇ ಓವರ್ನ ಎಲ್ಲ ಎಸೆತಗಳನ್ನು ಎದುರಿಸಿದ ಲಿಯಾಮ್, ನಾಲ್ಕು ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 32 ರನ್ ಚಚ್ಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.