ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡವು ಮತ್ತೊಂದು ಆಘಾತಕ್ಕೊಳಗಾಗಿದೆ.

ಆಗಲೇ ಟೈಮಲ್ ಮಿಲ್ಸ್ ಸೇವೆಯಿಂದ ವಂಚಿತರಾಗಿರುವ ಇಂಗ್ಲೆಂಡ್ ತಂಡಕ್ಕೀಗ ಸ್ಟಾರ್ ಓಪನರ್ ಜೇನ್ ರಾಯ್ ಕೂಡ ಅಲಭ್ಯರಾಗಿದ್ದಾರೆ.

ಇದನ್ನೂ ಓದಿ:ನಿರಂತರ ತರಬೇತಿ, ಫಿಟ್ನೆಸ್, ಆಟದ ಮೇಲಿನ ಪ್ರೀತಿ ಶೋಯಬ್ ಯಶಸ್ಸಿನ ಗುಟ್ಟು

ಸೂಪರ್ 12ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜೇಸನ್ ರಾಯ್ ಗಾಯದ ಸಮಸ್ಯೆಗೊಳಗಾಗಿದ್ದರು. ಇದೀಗ ಟೂರ್ನಿಯ ಉಳಿದಿರುವ ಪಂದ್ಯಗಳಿಗೆಅಲಭ್ಯರಾಗಿದ್ದಾರೆ.

ಜೇಸನ್ ರಾಯ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಘೋಷಿಸಿರುವ ಇಂಗ್ಲೆಂಡ್, ಜೇಮ್ಸ್ ವಿನ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಬದಲಿ ಆಟಗಾರನ ಆಯ್ಕೆಗೆ ಐಸಿಸಿ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ.

ಸೂಪರ್-12 ಹಂತದಲ್ಲಿ ಜೋಸ್ ಬಟ್ಲರ್ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭವೊದಗಿಸಲು ಜೇಸನ್ ರಾಯ್ ನಿರ್ಣಾಯಕ ಪಾತ್ರ ವಹಿಸಿದ್ದರು. ಈಗ ಗಾಯದಿಂದಾಗಿ ಟೂರ್ನಿಗೆ ಅಲಭ್ಯರಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೂ ಇಂಗ್ಲೆಂಡ್ ಬಯೋಬಬಲ್‌ನಲ್ಲೇ ಉಳಿದುಕೊಂಡು ತಂಡಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.