ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಈ ಬಾರಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಅದರಿಂದಾಗಿ ತಂಡದ ಮೇಲೆ ಅಪಾರ ನಿರೀಕ್ಷೆಗಳ ಒತ್ತಡ ಇರುತ್ತದೆ. ಇದನ್ನು ಮೀರಿ ನಿಂತರೆ ವಿಶ್ವಕಪ್ ಜಯಿಸುವುದು ಸಾಧ್ಯವಾಗಲಿದೆ ಎಂದು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿದರು.

‘ಕಳೆದ ಹಲವಾರು ವರ್ಷಗಳಿಂದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತದೆ. ಭಾರತ ತಂಡವು ಸದ್ಯ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಆರಂಭಿಸಿದೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ‘ ಎಂದು ಮಂಗಳವಾರ ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ)ಯಲ್ಲಿ ಕಾಲ್‌ವೇ ಗಾಲ್ಫ್ ಇಂಡಿಯಾದ ಫಿಟ್ಟಿಂಗ್ ಸೆಂಟರ್ ಉದ್ಘಾಟಿಸಿದ ಅವರು ಮಾತನಾಡಿದರು.

’ಭಾರತ ತಂಡವು ತವರಿನಲ್ಲಿಯೂ ವಿಶ್ವಕಪ್ ಜಯಿಸಿದೆ. ಆದ್ದರಿಂದ ಈ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ತಂಡಕ್ಕಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಟೂರ್ನಿಗಾಗಿ ಎಲ್ಲ ಆಟಗಾರರೂ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಂಬ ವಿಶ್ವಾಸವಿದೆ‘ ಎಂದರು.

‘ನಾವು ಆಡುವ ಕಾಲಘಟ್ಟ ಬೇರೆ ಇತ್ತು. ಆಗ ಇಷ್ಟೊಂದು ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರಲಿಲ್ಲ. ಈಗ ಪೈಪೋಟಿ ಮತ್ತು ಪಂದ್ಯಗಳ ಸಂಖ್ಯೆ ಎರಡೂ ಹೆಚ್ಚಾಗಿದೆ. ಆದ್ದರಿಂದ ದೇಹದ ಕ್ಷಮತೆಯನ್ನು ಕಾಪಾಡಿಕೊಳ್ಳುವುದೇ ಮುಖ್ಯ ಸವಾಲು. ಗಾಯದಿಂದ ರಕ್ಷಿಸಿಕೊಳ್ಳುವುದು ಕೂಡ ಮಹತ್ವದ ಕಾರ್ಯವಾಗಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.