ಸೇಂಟ್ ಲೂಸಿಯಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮಾಡಿರುವ ಭಾರತ ತಂಡದ ಕಪ್ತಾನ ರೋಹಿತ್ ಶರ್ಮಾ ಕೇವಲ ಎಂಟು ರನ್ ಅಂತರದಲ್ಲಿ ಶತಕ ವಂಚಿರಾಗಿದ್ದರು.

ಈ ಕುರಿತು ಕೇಳಿದಾಗ, 'ನಾನು ವೈಯಕ್ತಿಕ ಮೈಲಿಗಲ್ಲಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎದುರಾಳಿ ತಂಡದ ಬೌಲರ್ಗಳ ಮೇಲೆ ಹೆಚ್ಚಿನ ಒತ್ತಡ ಹೇರಿ ತಂಡಕ್ಕೆ ಉತ್ತಮ ಆರಂಭ ನೀಡುವುದೇ ನನ್ನ ಗುರಿ' ಎಂದು ಹೇಳಿದ್ದಾರೆ.

ಕಳೆದ ಏಕದಿನ ವಿಶ್ವಕಪ್ನಲ್ಲೂ ರೋಹಿತ್ ಬ್ಯಾಟಿಂಗ್ ಶೈಲಿ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಟ್ವೆಂಟಿ-20 ವಿಶ್ವಕಪ್ನಲ್ಲೂ ನಿಸ್ವಾರ್ಥ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ರೋಹಿತ್ 41 ಎಸೆತಗಳಲ್ಲಿ 92 ರನ್ ಗಳಿಸಿ ಅಬ್ಬರಿಸಿದ್ದರು. ಅವರ ಸ್ಫೋಟಕ ಇನಿಂಗ್ಸ್ನಲ್ಲಿ ಎಂಟು ಸಿಕ್ಸರ್ಗಳು ಸೇರಿದ್ದವು.

'ನನ್ನ ಸಾಮರ್ಥ್ಯದ ಮೇಲೆ ಹೆಚ್ಚಿನ ನಂಬಿಕೆಯನ್ನಿಡುತ್ತೇನೆ. ನನ್ನ ಪಾಲಿಗೆ ಅರ್ಧಶತಕ ಅಥವಾ ಶತಕ ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುವುದಿಲ್ಲ' ಎಂದು ಅವರು ಹೇಳಿದ್ದಾರೆ.

'ಬೌಲರ್ಗಳನ್ನು ಚಿಂತೆಗೀಡು ಮಾಡುವುದು ನನ್ನ ಗುರಿಯಾಗಿತ್ತು. ಇಂತಹ ಪಿಚ್ನಲ್ಲಿ ಆಡುವಾಗ ಅನೇಕ ವಿಚಾರಗಳು ಮುಖ್ಯವೆನಿಸುತ್ತದೆ. ವೇಗವಾಗಿ ಬೀಸುವ ಗಾಳಿಯು ಪ್ರಮುಖ ಅಂಶವಾಗಿದೆ. ಏನೂ ಬೇಕಾದರೂ ಸಂಭವಿಸಬಹುದು. ಬಿರುಸಾಗಿ ರನ್ ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸುವುದು ನನ್ನ ಗುರಿಯಾಗಿತ್ತು' ಎಂದು ಹೇಳಿದ್ದಾರೆ.
.T20 WC: ಇತಿಹಾಸ ರಚಿಸಿದ ಅಫ್ಗನ್, ಗಾಯದ ನಾಟಕವಾಡಿದ ಗುಲ್ಬದಿನ್, ಆಸೀಸ್ ನಿರ್ಗಮನ.T20 WC: ಭಾರತ, ಆಸ್ಟ್ರೇಲಿಯಾ ಪಂದ್ಯದ ಪ್ರಮುಖ ಹೈಲೈಟ್ಸ್....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.