ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ನ್ಯೂಜಿಲೆಂಡ್‌ನ ಕನಸು ಭಗ್ನಗೊಂಡಿದೆ. ಇದೇ ಮೊದಲ ಬಾರಿಗೆ ಗುಂಪು ಹಂತದಲ್ಲೇ ನಿರ್ಗಮಿಸಿದೆ.

'ಸಿ' ಗುಂಪಿನಲ್ಲಿ ಇಂದು ನಡೆದ ಮಹತ್ವದ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ವಿರುದ್ಧ ಅಫ್ಗಾನಿಸ್ತಾನ ಗೆಲುವು ದಾಖಲಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ಮುಂದಿನ ಹಂತಕ್ಕೆ ಪ್ರವೇಶಿಸುವ ಆಸೆ ಕಮರಿದೆ.

ಸಿ ಗುಂಪಿನಲ್ಲಿ ಅಫ್ಗಾನಿಸ್ತಾನ ಹಾಗೂ ಅತಿಥೇಯ ವೆಸ್ಟ್‌ಇಂಡೀಸ್ ತಂಡಗಳು ಆಡಿರುವ ಎಲ್ಲ ಮೂರು ಪಂದ್ಯಗಳನ್ನೂ ಗೆದ್ದು, ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ಹಾಗೂ ಉಗಾಂಡ ತಂಡಗಳು ನಿರ್ಗಮಿಸಿವೆ.

ನ್ಯೂಜಿಲೆಂಡ್ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಅಫ್ಗಾನಿಸ್ತಾನ ವಿರುದ್ಧ 84 ರನ್ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ 13 ರನ್ ಅಂತರದ ಸೋಲಿಗೆ ಶರಣಾಗಿತ್ತು. ಜೂನ್ 14ರಂದು ಉಗಾಂಡ ಹಾಗೂ ಹಾಗೂ ಜೂನ್ 17ರಂದು ಪಾಪುವಾ ನ್ಯೂಗಿನಿ ವಿರುದ್ಧ ಕಣಕ್ಕಿಳಿಯಲಿವೆ. ಈ ಪಂದ್ಯಗಳು ಔಪಚಾರಿಕತೆಗಷ್ಟೇ ಸೀಮಿತಗೊಂಡಿದೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಸಾಧನೆ:

2007: ಸೆಮಿಫೈನಲ್

2009: ಸೂಪರ್ 8

2010: ಸೂಪರ್ 8

2012: ಸೂಪರ್ 8

2014: ಸೂಪರ್ 10

2021: ರನ್ನರ್-ಅಪ್

2022: ಸೆಮಿಫೈನಲ್

2024: ಗುಂಪು ಹಂತ
.T20 WC: ಅಮೆರಿಕಕ್ಕೆ 5 ರನ್ ಪೆನಾಲ್ಟಿ, ಅರ್ಷದೀಪ್ ದಾಖಲೆ, ಕೊಹ್ಲಿ ಗೋಲ್ಡನ್ ಡಕ್.T20 World Cup: ಪಾಪುವಾ ವಿರುದ್ಧ ಗೆದ್ದು ಎಂಟರ ಘಟ್ಟ ತಲುಪಿದ ಅಫ್ಗಾನಿಸ್ತಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.