ನಾಟಿಂಗ್ಹ್ಯಾಂ: ಭಾರತದ ಟೆಸ್ಟ್ ಕ್ರಿಕೆಟ್ ಪರಿಣಿತ ಹನುಮ ವಿಹಾರಿ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್ನ ಪದಾರ್ಪಣೆ ಪಂದ್ಯದಲ್ಲೇ ನಿರಾಸೆ ಕಂಡಿದ್ದಾರೆ. ವಾರ್ವಿಕ್ಶೈರ್ ತಂಡದ ಪರ ಆಡುತ್ತಿರುವ ಅವರು ನಾಟಿಂಗ್ಹ್ಯಾಂ ಶೈರ್ ಎದುರಿನ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

ಬರ್ಮಿಂಗ್ಹ್ಯಾಂ ಮೂಲದ ಕೌಂಟಿ ತಂಡವಾಗಿರುವವಾರ್ವಿಕ್ಶೈರ್ ಪರ ಕನಿಷ್ಠ ಮೂರು ಪಂದ್ಯಗಳನ್ನು ಆಡಲು ಹನುಮ ವಿಹಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಮೊದಲ ಇನಿಂಗ್ಸ್ನಲ್ಲಿ 40 ನಿಮಿಷ ಕ್ರೀಸ್ನಲ್ಲಿದ್ದ ಹನುಮ ವಿಹಾರಿ ಇಂಗ್ಲೆಂಡ್ ರಾಷ್ಟ್ರೀಯ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಮತ್ತು ಯುವ ಆಟಗಾರ ಜಾಕ್ ಚಾಪೆಲ್ ಅವರ ಎಸೆತಗಳಿಗೆ ಉತ್ತರ ನೀಡಲು ಪರದಾಡಿದರು. 23 ಎಸೆತಗಳನ್ನು ಎದುರಿಸಿದ ಅವರು ಬ್ರಾಡ್ ಎಸೆತದಲ್ಲಿ ಹಸೀಬ್ ಹಮೀದ್ಗೆ ಕ್ಯಾಚ್ ನೀಡಿದರು.

ಲಿಯಾಮ್ ಪ್ಯಾಟರ್ಸನ್ ವೈಟ್ (73; 117 ಎಸೆತ, 12 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದನಾಟಿಂಗ್ಹ್ಯಾಂ ಶೈರ್ 88 ಓವರ್ಗಳಲ್ಲಿ 273 ರನ್ ಗಳಿಸಿತ್ತು. ಒಂದು ಓವರ್ ಬೌಲಿಂಗ್ ಮಾಡಿದ ಹನುಮ ವಿಹಾರಿ 11 ರನ್ ನೀಡಿದ್ದರು.

ವಾರ್ವಿಕ್ಶೈರ್ ಇನಿಂಗ್ಸ್ನ ಮೂರನೇ ಕ್ರಮಾಂಕದಲ್ಲಿ ಆಡಿದ ಹನುಮ ಎರಡನೇ ಓವರ್ನಲ್ಲಿ ಕ್ರೀಸ್ಗೆ ಬಂದಿದ್ದರು. ದಿನದಾಟದ ಅಂತ್ಯಕ್ಕೆ ತಂಡ 10 ಓವರ್ಗಳಲ್ಲಿ ಎರಡು ವಿಕೆಟ್ಗಳಿಗೆ 24 ರನ್ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.