ಲಂಡನ್: ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಗ್ರಹಾಂ ಥೋರ್ಪ್ ಅವರು ರೈಲು ನಿಲ್ದಾಣವೊಂದರಲ್ಲಿ ಸಂಭವಿಸಿದ ಅವಘಡದಲ್ಲಿ ರೈಲು ಬಡಿದು ಸಾವಿಗೀಡಾಗಿದ್ದರು ಎಂಬುದು ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆಯ ವೇಳೆ ಬಯಲಾಗಿದೆ.

ಮಂಗಳವಾರ ಅವರ ಸಾವಿನ ಕಾರಣಕ್ಕೆ ಸಂಬಂಧಿಸಿ ವಿಚಾರಣೆ ನಡೆದಿದೆ.

55 ವರ್ಷದ ಥೋರ್ಪ್ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು ಎಂದು ಸೋಮವಾರ ಅವರ ಪತ್ನಿ ‘ದಿ ಟೈಮ್ಸ್’ಗೆ ನೀಡಿದ್ದ ಸಂದರ್ಶನದಲ್ಲಿ ಮೊದಲ ಬಾರಿ ಬಹಿರಂಗಪಡಿಸಿದ್ದರು.

ನೈರುತ್ಯ ಲಂಡನ್‌ನ ಈಶರ್ ರೈಲು ನಿಲ್ದಾಣದಲ್ಲಿ ಆಗಸ್ಟ್ 4ರಂದು ಥೋರ್ಪ್ ಗಂಭೀರ ಗಾಯಗಳೊಂದಿಗೆ ಸಾವಿಗೀ ಡಾಗಿದ್ದರು ಎಂದು ಸರ್ರೆಯ ವಿಚಾರಣಾ ನ್ಯಾಯಾಲಯದಲ್ಲಿ ತಿಳಿಸಲಾಗಿದೆ.

ಅಲ್ಪಾವಧಿಯ ವಿಚಾರಣೆಯಲ್ಲಿ ನ್ಯಾಯಾಲಯದ ಕೊರೊನರ್ ಆಗಿರುವ ಸೈಮನ್ ವಿಕೆನ್ಸ್ ಅವರು ಥೋರ್ಪ್ ಸಾವಿನ ಕುರಿತಾದ ಹೇಳಿಕೆಯನ್ನು ಧ್ವನಿಮುದ್ರಿಸಿಕೊಂಡರು.

ಈ ಪ್ರಕರಣದ ಪೂರ್ಣಪ್ರಮಾ ಣದ ತನಿಖೆಯ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದರು.

ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ಥೋರ್ಪ್ 1993 ರಿಂದ 2005ರ ಅವಧಿಯಲ್ಲಿ ಇಂಗ್ಲೆಂಡ್ ತಂಡದಲ್ಲಿ ಆಡಿದ್ದರು. ನಂತರ ಕೋಚ್ ಕೂಡ ಆಗಿದ್ದರು.

ಈ ಮೊದಲು ಥೋರ್ಪ್ ಕುಟುಂಬದವರು ಅವರ ಸಾವಿನ ಕಾರಣವನ್ನು ಬಹಿರಂಗಪಡಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.