ನವದೆಹಲಿ: ’ಜಂಜೀರ್’ ಮತ್ತು ‘ದೀವಾರ್’ ಮೂಲಕ ಬೆಳ್ಳಿತೆರೆಯಲ್ಲಿ ಅಮಿತಾಬ್ ಬಚ್ಚನ್ ಮಿಂಚುತ್ತಿದ್ದರೆ ಮನಮಿಡಿಯುವ ಹಾಡುಗಳ ಮೂಲಕ ಕಿಶೋರ್ ಕುಮಾರ್ ಗಾನಪ್ರಿಯರ ಹೃದಯ ಕದ್ದಿದ್ದ ಕಾಲವದು. ಅದೇ ಸಂದರ್ಭದಲ್ಲಿ ಯುವ ಕ್ರಿಕೆಟಿಗನೊಬ್ಬ ಬ್ಯಾಟ್ ಮೂಲಕ ದೇಶದ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೇರಿಸಲು ಪ್ರಯತ್ನಿಸಿದ್ದರು...

ಇದು, 70ರ ದಶಕದ ಕಥೆ. ಅಮಿತಾಬ್ ಬಚ್ಚನ್ ಮತ್ತು ಕಿಶೋರ್ ಕುಮಾರ್ ಬೆಳೆದ ಮುಂಬೈ ನಗರದಲ್ಲೇ ಬೆಳೆದ ಆ ಆಟಗಾರ ಬೇರೆ ಯಾರೂ ಅಲ್ಲ; ಕ್ರೀಸ್ನಲ್ಲಿ ಲಂಗರು ಹಾಕಿ ಎದುರಾಳಿ ಬೌಲರ್ಗಳನ್ನು ಕಂಗೆಡಿಸುತ್ತಿದ್ದ ಸುನಿಲ್ ಗಾವಸ್ಕರ್. ಅವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಮಾರ್ಚ್ ಆರಕ್ಕೆ 50 ವರ್ಷ.

ಈ ವಿಶೇಷ ಸಂದರ್ಭದ ಮುನ್ನಾ ದಿನವಾದ ಶುಕ್ರವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಅಮಿತಾಬ್ ಬಚ್ಚನ್ ಮತ್ತು ಕಿಶೋರ್ ಕುಮಾರ್ ಅವರಿಗೆ ನೀಡಿದ ಸ್ಥಾನವನ್ನೇನಾದರೂ ನನಗೂ ನೀಡಿದರೆ ಅದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬಚ್ಚನ್ ಅವರು ಈಗಲೂ ಭಾರತದ ಅಭಿಮಾನ ಪುರುಷ. ಮಧುರ ಕಂಠದ ಕಿಶೋರ್ ಕುಮಾರ್ ಅವರನ್ನು ಜನಮಾನಸದಿಂದ ತೆಗೆದು ಹಾಕಲು ಯಾರಿಗಾದರೂ ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದ ಗಾವಸ್ಕರ್ 1971ರ ಮಾರ್ಚ್ ಆರರಂದು ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ನೆನಪಿನಂಗಳಕ್ಕೆ ಜಾರಿದರು.

‘ಕೊನೆಗೂ ದೇಶದ ‘ಕ್ಯಾಪ್’ ಧರಿಸಿ ಕಣಕ್ಕೆ ಇಳಿಯಲು ಸಾಧ್ಯವಾದ ಸಾರ್ಥಕತೆ ಮನಸ್ಸಿಗೆ ಮುದ ನೀಡಿತ್ತು. ಅದೇ ಸಂದರ್ಭದಲ್ಲಿ ಆತಂಕವೂ ಕಾಡುತ್ತಿತ್ತು. ಯಾಕೆಂದರೆ ಆಗ ನಾವು ಎದುರಿಸಿದ್ದು ಖ್ಯಾತ ಕ್ರಿಕೆಟಿಗ ಗ್ಯಾರಿ ಸೋಬರ್ಸ್ ನಾಯಕತ್ವದ ತಂಡವನ್ನು’ ಎಂದು ಗಾವಸ್ಕರ್ ಹೇಳಿದರು.

ಪದಾರ್ಪಣೆ ಸರಣಿಯ ನಾಲ್ಕು ಪಂದ್ಯಗಳಲ್ಲಿ ಗವಾಸ್ಕರ್ ಒಟ್ಟು 774 ರನ್ ಕಲೆ ಹಾಕಿದ್ದರು. ಅದರ ಬಗ್ಗೆ ಅವರಿಗೆ ಅಭಿಮಾನವಿದೆ. ‘ಆ ಸರಣಿಯಲ್ಲಿ 400 ರನ್ ಗಳಿಸಿದ್ದರೂ ನನ್ನ ಪಾಲಿಗೆ ಅದು ಶ್ರೇಷ್ಠ ಸಾಧನೆಯೇ ಆಗುತ್ತಿತ್ತು’ ಎಂದರು.

17 ವರ್ಷ ಕ್ರಿಕೆಟ್ ಆಡಿದ ಗಾವಸ್ಕರ್ ಅಪಾಯಕಾರಿ ವೇಗಿಗಳು ಇರುವ ತಂಡಗಳ ಎದುರಿನ ಪಂದ್ಯಗಳು ಸೇರಿದಂತೆ ಯಾವ ತಂಡಗಳ ಎದುರು ಕೂಡ ಹೆಲ್ಮೆಟ್ ಧರಿಸುತ್ತಿರಲಿಲ್ಲ. ಪಿಚ್ಗೆ ಕುಕ್ಕಿ ಪುಟಿಯುವ ಬೌನ್ಸರ್ಗಳನ್ನು ರನ್ ಗಳಿಸುವುದಕ್ಕೆ ಇರುವ ಅವಕಾಶವೆಂದೇ ತಿಳಿಯುತ್ತಿದ್ದರು. ಹೆಲ್ಮೆಟ್ ಧರಿಸದೇ ಆಡುವ ಅಭ್ಯಾಸವನ್ನು ಕ್ಲಬ್ ಮಟ್ಟದಲ್ಲೇ ಬೆಳೆಸಿಕೊಂಡಿದ್ದೆ ಎಂಬುದು ಅವರ ವಿವರಣೆ.

ಗವಾಸ್ಕರ್ಗೆ ಈಗ 71 ವರ್ಷ. ಅವರೀಗ ಬರಹಕಾರ, ವೀಕ್ಷಕ ವಿವರಣೆಗಾರ ಮುಂತಾದ ಬಹುಮುಖ ಪ್ರತಿಭೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.