ದುಬೈ: ವಿಶ್ವಕಪ್ ಆರಂಭಕ್ಕೆ ಸುಮಾರು ಎರಡು ತಿಂಗಳು ಇರುವಂತೆಯೇ ಬುಧವಾರ ಪ್ರಕಟವಾದ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ಆರಂಭ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರು ಜೀವನಶ್ರೇಷ್ಠ ರ್‍ಯಾಂಕಿಂಗ್ ದಾಖಲಿಸಿದ್ದಾರೆ.

ಗಿಲ್ (743 ಅಂಕ) ಎರಡು ಸ್ಥಾನಗಳಷ್ಟು ಬಡ್ತಿ ಕಂಡಿದ್ದು ಐದನೇ ಸ್ಥಾನಕ್ಕೇರಿದ್ದಾರೆ. ಪಾಕ್ ಆಟಗಾರರಾದ ಬಾಬರ್ ಆಜಂ, ಫಖ್ರ್ ಜಮಾನ್ (755) ಮತ್ತು ಇಮಾಂ ಉಲ್ ಹಕ್ (745) ಅವರಿಗೆ ತೀರಾ ಹತ್ತಿರದಲ್ಲಿದ್ದಾರೆ.

ಇಶಾನ್ ಕಿಶನ್ ಒಟ್ಟಾರೆ 36ನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ 10 ಸ್ಥಾನಗಳಷ್ಟು ಸುಧಾರಣೆ ಕಂಡಿದ್ದು 71ನೇ ಸ್ಥಾನದಲ್ಲಿದ್ದಾರೆ.

ಇತ್ತೀಚಿನ ಕೆಲವು ಉತ್ತಮ ಪ್ರದರ್ಶನಗಳ ಕಾರಣ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ ಟೆನ್‌ನಲ್ಲಿ (10ನೇ ಸ್ಥಾನ) ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ 30ನೇ ಸ್ಥಾನದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.