ಕೋಲ್ಕತ್ತ: ‘ಐಪಿಎಲ್‌ನಲ್ಲಿ ಹಲವು ಸಲ ಅನೂಹ್ಯ ಸಂಗತಿಗಳು ಘಟಿಸುವುದನ್ನು ನೋಡಿದ್ದೇನೆ. ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಏಕಾಂಗಿಯಾಗಿಯೇ ದೊಡ್ಡ ಮೊತ್ತವನ್ನು ಬೆನ್ನತ್ತಿ ತಮ್ಮ ತಂಡಗಳಿಗೆ ಗೆಲುವು ಕೊಡಿಸಿರುವುದನ್ನು ನೋಡಿದ್ದೇನೆ. ಅವರ ಆ ರೀತಿಯ ಆಟವೇ ನನಗೂ ಪ್ರೇರಣೆ’ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಹೇಳಿದರು.

ಮಂಗಳವಾರ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 224 ರನ್‌ಗಳ ಗುರಿ ಬೆನ್ನತ್ತಿದ್ದ ರಾಯಲ್ಸ್ ತಂಡವು ಜಯಿಸಿತ್ತು. ಆರಂಭಿಕ ಬ್ಯಾಟರ್ ಬಟ್ಲರ್ ಕೊನೆಯ ಎಸೆತದವರೆಗೂ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಶತಕ ಕೂಡ ಗಳಿಸಿದ್ದರು. ರಾಯಲ್ಸ್ ತಂಡವು 13ನೇ ಓವರ್‌ನಲ್ಲಿ 121 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ವಾಲಿತ್ತು. ಆದರೆ ಇಂಗ್ಲೆಂಡ್ ಆಟಗಾರ ಬಟ್ಲರ್ ಅದನ್ನು ತಪ್ಪಿಸಿ ಗೆಲುವಿನ ಕಾಣಿಕೆ ನೀಡಿದರು.

‘ನಾನು ಲಯ ಕಂಡುಕೊಳ್ಳಲು ಬಹಳಷ್ಟು ಕಷ್ಟಪಟ್ಟಿದ್ದೆ. ಹತಾಶೆಗೊಂಡಾಗ ಮತ್ತು ಸ್ವಯಂ ಪ್ರಶ್ನೆ ಕೇಳಿಕೊಳ್ಳುವ ಪರಿಸ್ಥಿತಿ ಬಂದಾಗಲೆಲ್ಲ ಎದೆಗುಂದಲಿಲ್ಲ. ಇರಲಿ. ನಿಲ್ಲಬೇಡ, ಮುಂದುವರಿಯುತ್ತಿರು ಎಂದು ನನಗೆ ನಾನೇ ಸ್ಫೂರ್ತಿ ತುಂಬಿಕೊಳ್ಳುತ್ತೇನೆ. ಅದರೊಂದಿಗೆ ಲಯವನ್ನು ಕಂಡುಕೊಳ್ಳುತ್ತೇನೆ’ ಎಂದು 33 ವರ್ಷದ ಬಟ್ಲರ್ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.

‘ಈ ಶತಕದ ಆಟವು ಐಪಿಎಲ್‌ನಲ್ಲಿ ನನಗೆ ಅತ್ಯಂತ ಹೆಮ್ಮೆ ಹಾಗೂ ತೃಪ್ತಿ ನೀಡಿದ ಇನಿಂಗ್ಸ್’ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್, ‘ಬಟ್ಲರ್ ಅತ್ಯಂತ ವಿಶೇಷ ಆಟಗಾರ. ಅವರು ಒಮ್ಮೆ ಲಯಕ್ಕೆ ಕುದುರಿಕೊಂಡರೆ ಮುಗೀತು. ಯಾವುದೇ ಮೊತ್ತದ ಗುರಿ ತಲುಪುವುದು ಅಸಾಧ್ಯವೇನಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.