ಹೈದರಾಬಾದ್: ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ 133 ರನ್ಗಳಿಂದ ಸುಲಭವಾಗಿ ಗೆದ್ದುಕೊಂಡಿತು.

ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಶತಕ ಹಾಗೂ ಅನುಭವಿ ಬ್ಯಾಟರ್ಗಳ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು.

ಭಾರತ 20 ಓವರುಗಳಲ್ಲಿ 6 ವಿಕೆಟ್ಗೆ 297 ರನ್ಗಳ ಭಾರಿ ಮೊತ್ತ ಗಳಿಸಿತು. ಭಾರತದ ಆಕ್ರಮಣದ ಆಟದೆದುರು ಕಂಗಾಲಾದ ಬಾಂಗ್ಲಾದೇಶ 20 ಓವರುಗಳಲ್ಲಿ 7 ವಿಕೆಟ್ಗೆ 164 ರನ್ ಗಳಿಸಿ ಸವಾಲು ಮುಗಿಸಿತು.

ಪ್ರಮುಖಾಂಶಗಳು...

* ಭಾರತ ಈ ಸರಣಿಯನ್ನು 3–0ಯಿಂದ ಗೆದ್ದುಕೊಂಡಿತು.

* ಭಾರತದ ಇನಿಂಗ್ಸ್ನಲ್ಲಿ ದಾಖಲೆಯ 22 ಸಿಕ್ಸರ್, 25 ಬೌಂಡರಿಗಳು ಹರಿದು ಬಂದವು

* 7.2 ಓವರ್ ಆಗಿದ್ದಾಗ 100, 14 ಓವರ್ಗಳಲ್ಲಿ 200 ರನ್ ಗಡಿ ದಾಟಿದ ಭಾರತ

* ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ (297/6).

* ನೇಪಾಳ, ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 3 ವಿಕೆಟ್ಗೆ 314 ರನ್ ಗಳಿಸಿದ್ದು ದಾಖಲೆಯಾಗಿದೆ.

* ಟೆಸ್ಟ್ ಆಡುವ ತಂಡಗಳ ಪೈಕಿ ಇದು ದಾಖಲೆಯ ಮೊತ್ತ. 2019ರಲ್ಲಿ ಡೆಹ್ರಾಡೂನ್ ನಲ್ಲಿ ಅಫ್ಗಾನಿಸ್ತಾನ, ಐರ್ಲೆಂಡ್ ವಿರುದ್ಧ 3 ವಿಕೆಟ್ಗೆ 278 ರನ್ ಗಳಿಸಿದ್ದು, ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.

* ಭಾರತದ ಈ ಹಿಂದಿನ ಗರಿಷ್ಠ ಮೊತ್ತ 5 ವಿಕೆಟ್ಗೆ 260 ರನ್ಗಳಾಗಿತ್ತು. ಇದನ್ನು ಶ್ರೀಲಂಕಾ ವಿರುದ್ಧ 2017ರಲ್ಲಿ ಇಂದೋರ್ನಲ್ಲಿ ಗಳಿಸಿತ್ತು.

* ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ (4x11, 6x8) ಚಚ್ಚಿದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ. ವೇಗದ ಶತಕದ ದಾಖಲೆ ರೋಹಿತ್ ಶರ್ಮಾ (35 ಎಸೆತ) ಹೆಸರಿನಲ್ಲಿದೆ.

* ಸೂರ್ಯಕುಮಾರ್ ಕೇವಲ 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅವರು 75 ರನ್ ಸಿಡಿಸಿದರು.

* ವೇಗದ ನವತಾರೆ ಮಯಂಕ್ ಯಾದವ್ 2, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ 3 ವಿಕೆಟ್ ಪಡೆದರು.

* ಈ ಪಂದ್ಯದಲ್ಲಿ ಬಾಂಗ್ಲಾದ ತೌಹಿದ್ ಹೃದಯ್ ಅಜೇಯ 63, ಲಿಟನ್ ದಾಸ್ 42 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ಹೇಳಿಕೊಳ್ಳುವಂಥ ಹೋರಾಟ ಕಂಡುಬರಲಿಲ್ಲ.

* ಬಾಂಗ್ಲಾದ ಹಸನ್ ಶಕೀಬ್ 3 ವಿಕೆಟ್ ಪಡೆದರು.
.IND vs BAN T20 | ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಬೆಚ್ಚಿದ ಬಾಂಗ್ಲಾ.IND vs BAN 3rd T20I: ಭಾರತಕ್ಕೆ ಕ್ಲೀನ್ಸ್ವೀಪ್ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.