ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲರ್ ರೇಣುಕಾ ಸಿಂಗ್ ಅವರು ಐಸಿಸಿ ಮಹಿಳಾ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ 10 ಕ್ರಮಾಂಕ ಮೇಲಕ್ಕೇರಿ 18ನೇ ಸ್ಥಾನ ಗಳಿಸಿದ್ದಾರೆ.

ಕಾಮನ್ವೆಲ್ತ್ ಕೂಟದ ಟಿ20 ಟೂರ್ನಿಯಲ್ಲಿ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ್ದ ರೇಣುಕಾ, ಒಟ್ಟು 11 ವಿಕೆಟ್ ಪಡೆದುಕೊಂಡಿದ್ದರು. ಅವರು ಅಗ್ರ 20 ರೊಳಗಿನ ಸ್ಥಾನ ಪಡೆದದ್ದು ಇದೇ ಮೊದಲು.

ಜೆಮಿಮಾ ರಾಡ್ರಿಗಸ್ ಏಳು ಸ್ಥಾನ ಮೇಲಕ್ಕೇರಿ 10ನೇ ಸ್ಥಾನ ಗಳಿಸಿದ್ದಾರೆ. 2021ರ ಅಕ್ಟೋಬರ್ ಬಳಿಕ ಅವರು ಇದೇ ಮೊದಲ ಬಾರಿ ಅಗ್ರ 10 ರಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಮೃತಿ ಮಂದಾನ ಅವರು ಎರಡು ಕ್ರಮಾಂಕ ಕುಸಿತ ಕಂಡು ನಾಲ್ಕನೇ ಸ್ಥಾನ ಪಡೆದರೆ, ಶಫಾಲಿ ವರ್ಮಾ ಆರನೇ ಸ್ಥಾನಕ್ಕೆ ಕುಸಿತ ಕಂಡರು. ಬ್ಯಾಟರ್ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ 36ನೇ ಸ್ಥಾನ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.