ದುಬೈ: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹೊರತಾಗಿಯೂ ಭಾರತ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.

'ಎ' ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 58 ರನ್ ಅಂತರದ ಸೋಲಿಗೆ ಶರಣಾಗಿದ್ದ ಹರ್ಮನ್‌ಪ್ರೀತ್ ಕೌರ್ ಬಳಗವು ಬಳಿಕದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿತ್ತು.

ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆರು ವಿಕೆಟ್ ಮತ್ತು ಶ್ರೀಲಂಕಾ ವಿರುದ್ಧ 82 ರನ್ ಅಂತರದ ಜಯ ಗಳಿಸಿತ್ತು.

ಮೂರು ಪಂದ್ಯಗಳ ಪೈಕಿ ನಾಲ್ಕು ಅಂಕ ಗಳಿಸಿರುವ ಭಾರತ ತಂಡವೀಗ 'ಎ' ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಭಾರತ +0.576ರ ನೆಟ್ ರನ್‌ರೇಟ್ ಕಾಯ್ದುಕೊಂಡಿದೆ.

ಎಲ್ಲ ಮೂರೂ ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ಕೊನೆಯ ಸ್ಥಾನದಲ್ಲಿದ್ದು, ಕೂಟದಿಂದಲೇ ನಿರ್ಗಮಿಸಿದೆ.

ಈ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಪ್ರವೇಶಿಸಲಿವೆ. ಇದರಿಂದಾಗಿ ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

ಭಾರತ ತನ್ನ ಕೊನೆಯ ಪಂದ್ಯದಲ್ಲಿ ಅಕ್ಟೋಬರ್ 13ರಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರು ಅಂಕಗಳೊಂದಿಗೆ ಸುಲಭವಾಗಿ ಅಂತಿಮ ನಾಲ್ಕರ ಘಟ್ಟದ ಸ್ಥಾನವನ್ನು ಖಚಿತಪಡಿಸುವ ಅವಕಾಶವಿದೆ.

ಹಾಗೆಯೇ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ ಮತ್ತು ನ್ಯೂಜಿಲೆಂಡ್ ಉಳಿದಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋತರೆ ಭಾರತದ ಹಾದಿ ಸುಗಮವಾಗಲಿದೆ.

ಹಾಗೊಂದು ವೇಳೆ ಕೊನೆಯ ಪಂದ್ಯದಲ್ಲಿ ಭಾರತ ಸೋತರೆ ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ. ಅಲ್ಲದೆ ಇತರೆ ತಂಡಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಅಗತ್ಯವಿದೆ.

ಸದ್ಯ ಆಸ್ಟ್ರೇಲಿಯಾ +2.524, ಪಾಕಿಸ್ತಾನ +0.555 ಹಾಗೂ ನ್ಯೂಜಿಲೆಂಡ್ -0.050ರ ರನ್‌ರೇಟ್ ಕಾಯ್ದುಕೊಂಡಿದೆ.

'ಎ' ಗುಂಪಿನ ಅಂಕಪಟ್ಟಿ ಇಂತಿದೆ:
.ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ.ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.