ಕೋಲ್ಕತ್ತ: ಡೇವಿಡ್ ವಿಲಿ ಅವರ ಅಮೋಘ ಬೌಲಿಂಗ್ ಬಲದಿಂದ ಇಂಗ್ಲೆಂಡ್ ತಂಡವು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯಿಸಿತು.

2019ರ ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ ತಂಡವು ಈ ಬಾರಿ ಸೆಮಿಫೈನಲ್ ಪ್ರವೇಶಿಸಲಿಲ್ಲ. ಲೀಗ್ ಸುತ್ತಿನಲ್ಲಿ ಆರು ಅಂಕ ಗಳಿಸಿ ಏಳನೇ ಸ್ಥಾನ ಪಡೆಯಿತು. ಅದರೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಗಳಿಸುವ ಅವಕಾಶ ಉಳಿಸಿಕೊಂಡಿತು.

ಈಡನ್ ಗಾರ್ಡನ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿತು. ಬೆನ್ ಸ್ಟೋಕ್ಸ್ (84; 76ಎ, 4X11, 6X2), ಜಾನಿ ಬೆಸ್ಟೊ (59 ರನ್) ಮತ್ತು ಜೋ ರೂಟ್ (60 ರನ್) ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 337 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 43.3 ಓವರ್ಗಳಲ್ಲಿ 244 ರನ್ ಗಳಿಸಿ ಆಲೌಟ್ ಆಯಿತು. ಡೇವಿಡ್ ವಿಲಿ (56ಕ್ಕೆ3) ಅವರ ಬೌಲಿಂಗ್ ಎದುರು ಮಣಿಯಿತು.

ಪಾಕ್ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸಲು ‘ಅಸಾಧ್ಯ’ ಗುರಿ ಈ ಪಂದ್ಯದಲ್ಲಿತ್ತು. ಆರು ಓವರ್ಗಳಲ್ಲಿ 300 ರನ್ ಗಳಿಸಬೇಕಿತ್ತು.

ಆದರೆ ತಂಡವು 43.3 ಓವರ್ಗಳಲ್ಲಿ 244 ರನ್ ಗಳಿಸಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 337 (ಡೇವಿಡ್ ಮಲಾನ್ 31, ಜಾನಿ ಬೆಸ್ಟೊ 59, ಜೋ ರೂಟ್ 60, ಬೆನ್ ಸ್ಟೋಕ್ಸ್ 84, ಜೋಸ್ ಬಟ್ಲರ್ 27, ಹ್ಯಾರಿ ಬ್ರೂಕ್ 30, ಶಾಹೀನ್ ಶಾ ಆಫ್ರಿದಿ 72ಕ್ಕೆ2, ಹ್ಯಾರಿಸ್ ರವೂಫ್ 64ಕ್ಕೆ3, ಮೊಹಮ್ಮದ್ ವಾಸೀಂ ಜೂನಿಯರ್ 74ಕ್ಕೆ2)

ಪಾಕಿಸ್ತಾನ: 43.3 ಓವರ್ಗಳಲ್ಲಿ 244 (ಬಾಬರ್ ಆಜಂ 38, ಮೊಹಮ್ಮದ್ ರಿಜ್ವಾನ್ 36, ಸೌದ್ ಶಕೀಲ್ 29, ಆಘಾ ಸಲ್ಮಾನ್ 51, ಶಹೀನ್ ಆಫ್ರಿದಿ 25, ಹ್ಯಾರಿಸ್ ರವೂಫ್ 35, ಡೇವಿಡ್ ವಿಲಿ 56ಕ್ಕೆ3, ಆದಿಲ್ ರಶೀದ್ 55ಕ್ಕೆ2, ಗಸ್ ಅಟ್ಕಿನ್ಸನ್ 45ಕ್ಕೆ2, ಮೋಯಿನ್ ಅಲಿ 60ಕ್ಕೆ2)

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 93 ರನ್ ಜಯ. ಪಂದ್ಯಶ್ರೇಷ್ಠ: ಡೇವಿಡ್ ವಿಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.