ಇಂದೋರ್: ಬಲಗೈ ವೇಗದ ಬೌಲರ್ ಉಮೇಶ್ ಯಾದವ್, ಭಾರತದ ನೆಲದಲ್ಲಿ 100 ವಿಕೆಟ್ ಸಾಧನೆ ಮಾಡಿದ್ದಾರೆ.

ಇಂದೋರ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಉಮೇಶ್, ಸ್ಮರಣೀಯ ಸಾಧನೆ ಮಾಡಿದರು.

ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ 197ಕ್ಕೆ ಆಲೌಟ್: 88 ರನ್ ಮುನ್ನಡೆ

ಎರಡನೇ ದಿನದಾಟದಲ್ಲಿ ಕಾಂಗರೂ ಪಡೆಯನ್ನು 197 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಉಮೇಶ್ ಗಮನಾರ್ಹ ಪಾತ್ರ ವಹಿಸಿದರು. 12 ರನ್ ತೆತ್ತು ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಮೊಹಮ್ಮದ್ ಶಮಿಗೆ ವಿಶ್ರಾಂತಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಆಡುವ ಅವಕಾಶವನ್ನು ಉಮೇಶ್ ಯಾದವ್ ಗಿಟ್ಟಿಸಿಕೊಂಡಿದ್ದರು.

ತವರು ನೆಲದಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಉಮೇಶ್, ವಿದೇಶದಲ್ಲೂ ಈವರೆಗೆ 68 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ 55 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 168 ವಿಕೆಟ್‌ಗಳನ್ನು ಗಳಿಸಿದ್ದಾರೆ.

88 ರನ್‌ಗೆ 6 ವಿಕೆಟ್ ಗಳಿಸಿರುವುದು ಜೀವನಶ್ರೇಷ್ಠ ಸಾಧನೆಯಾಗಿದೆ. ಇನ್ನು ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

24 ಸಿಕ್ಸರ್: ಕೊಹ್ಲಿ ದಾಖಲೆ ಸರಿಗಟ್ಟಿದ ಉಮೇಶ್...
ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲೂ 17 ರನ್‌ಗಳ ಕಾಣಿಕೆ ನೀಡಿರುವ ಉಮೇಶ್, ಎರಡು ಸಿಕ್ಸರ್ ಬಾರಿಸಿದ್ದರು.

ಈ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ ಈವರೆಗೆ 24 ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದಕ್ಕಾಗಿ ಕೊಹ್ಲಿ 181 ಇನಿಂಗ್ಸ್ ತೆಗೆದುಕೊಂಡಿದ್ದರೆ ಉಮೇಶ್ 64 ಇನಿಂಗ್ಸ್‌ಗಳಲ್ಲಿ 24 ಸಿಕ್ಸರ್ ಸಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.