ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಆರಂಭಕ್ಕೆಮಳೆ ಅಡಚಣೆಯಾಗಿದೆ.

ಇದರಿಂದಾಗಿ ಪ್ರಥಮ ದಿನದಾಟದ ಮೊದಲ ಅವಧಿಯ ಆಟವು ಸಂಪೂರ್ಣವಾಗಿ ನಷ್ಟವಾಗಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ.

ಮಳೆಯಿಂದಾಗಿ ಟಾಸ್ ಕೂಡಾ ವಿಳಂಬವಾಗಿದೆ. ಅಂಪೈರ್ಗಳು ಮೈದಾನವನ್ನು ಪರಿಶೀಲಿಸುತ್ತಿದ್ದಾರೆ.

ಹಿಂದಿನ ದಿನವೇ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಗಿತ್ತು. ಏಕದಿನ ವಿಶ್ವಕಪ್ಗೆ ಸಮಾನವಾಗಿ ಇದೇ ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್ಷಿಪ್ ಆಯೋಜಿಸಲಾಗಿದೆ.

ಟೀಮ್ ಇಂಡಿಯಾ ಆಡುವ ಬಳಗ ಇಂತಿದೆ:
1. ವಿರಾಟ್ ಕೊಹ್ಲಿ (ನಾಯಕ), 2. ರೋಹಿತ್ ಶರ್ಮಾ, 3. ಶುಭಮನ್ ಗಿಲ್, 4. ಚೇತೇಶ್ವರ್ ಪೂಜಾರ್, 5. ಅಜಿಂಕ್ಯ ರಹಾನೆ (ಉಪ ನಾಯಕ), 6. ರಿಷಬ್ ಪಂತ್ (ವಿಕೆಟ್ ಕೀಪರ್), 7. ರವೀಂದ್ರ ಜಡೇಜ, 8. ರವಿಚಂದ್ರನ್ ಅಶ್ವಿನ್,
9. ಜಸ್ಪ್ರೀತ್ ಬೂಮ್ರಾ, 10. ಇಶಾಂತ್ ಶರ್ಮಾ, 11. ಮೊಹಮ್ಮದ್ ಶಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.