ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿ ಸರಣಿ ‘ಕ್ಲೀನ್ಸ್ವೀಪ್’ ಮಾಡುವ ಭಾರತದ ಕನಸಿಗೆ ಮಳೆ ಅಡ್ಡಿಯಾಯಿತು.

ಅಂತಿಮ ದಿನವಾದ ಸೋಮವಾರ ಮಳೆಯ ಕಾರಣ ಆಟ ನಡೆಯಲಿಲ್ಲ. ಚಹಾ ವಿರಾಮದವರೆಗೂ ಮಳೆ ನಿಲ್ಲದ ಕಾರಣ ದಿನದಾಟವನ್ನು ರದ್ದುಗೊಳಿಸಲಾಯಿತು. ಇದರಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 141 ರನ್ಗಳಿಂದ ಗೆದ್ದಿದ್ದ ರೋಹಿತ್ ಶರ್ಮಾ ಬಳಗ, ಎರಡು ಪಂದ್ಯಗಳ ಸರಣಿಯನ್ನು 1–0 ರಲ್ಲಿ ತನ್ನದಾಗಿಸಿಕೊಂಡಿತು.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 365 ರನ್ಗಳ ಗೆಲುವಿನ ಗುರಿಯನ್ನು ಆತಿಥೇಯ ತಂಡವು ಬೆನ್ನಟ್ಟಿತು. ಆದರೆ ಅಶ್ವಿನ್ (33ಕ್ಕೆ2) ದಾಳಿಯ ಮುಂದೆ ತಂಡವು 32 ಓವರ್ಗಳಲ್ಲಿ 2 ವಿಕೆಟ್ಗಳಿಗೆ 76 ರನ್ ಗಳಿಸಿತ್ತು. ವಿಂಡೀಸ್ ಗೆಲುವಿಗೆ ಇನ್ನೂ 289 ರನ್ಗಳು ಬೇಕಿದ್ದವು, ಭಾರತಕ್ಕೆ ಎಂಟು ವಿಕೆಟ್ಗಳ ಅಗತ್ಯವಿತ್ತು. ಆದರೆ ಮಳೆಯದ್ದೇ ಆಟ ನಡೆಯಿತು.

ಸರಣಿಯ ಎರಡೂ ಪಂದ್ಯಗಳನ್ನು ಗೆದ್ದಿದ್ದರೆ ಭಾರತಕ್ಕೆ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 24 ಪಾಯಿಂಟ್ಸ್ಗಳು ಲಭಿಸುತ್ತಿದ್ದವು. ಡಬ್ಲ್ಯುಟಿಸಿ ಋತುವಿನಲ್ಲಿ ಟೆಸ್ಟ್ ಗೆಲ್ಲುವ ತಂಡಕ್ಕೆ 12 ಪಾಯಿಂಟ್ಸ್ಗಳು ಲಭಿಸುತ್ತವೆ. ಡ್ರಾ ಆದರೆ ಎರಡೂ ತಂಡಗಳಿಗೆ ನಾಲ್ಕು ಪಾಯಿಂಟ್ಸ್ಗಳನ್ನು ನೀಡಲಾಗುತ್ತದೆ. ಭಾರತ ಈ ಸರಣಿಯಲ್ಲಿ ಒಟ್ಟು 16 ಪಾಯಿಂಟ್ಸ್ ಕಲೆಹಾಕಿತು.

ಭಾನುವಾರ ಎರಡನೇ ಇನಿಂಗ್ಸ್ ಆರಂಭಿಸಿದ್ದ ವಿಂಡೀಸ್ ತಂಡಕ್ಕೆ ನಾಯಕ ಕ್ರೇಗ್ ಬ್ರಾತ್ವೇಟ್ ಮತ್ತು ತೇಜನಾರಾಯಣ ಚಂದ್ರಪಾಲ್ ಮೊದಲ ವಿಕೆಟ್ಗೆ 38 ರನ್ ಸೇರಿಸಿದರು. ಅವರ ಜೊತೆಯಾಟವನ್ನು 18ನೇ ಓವರ್ನಲ್ಲಿ ಅಶ್ವಿನ್ ಮುರಿದರು. ತಮ್ಮ ಇನ್ನೊಂದು ಓವರ್ನಲ್ಲಿ ಕಿರ್ಕ್ ಮೆಕೆಂಜಿ ಅವರ ವಿಕೆಟ್ ಕೂಡ ತಮ್ಮದಾಗಿಸಿಕೊಂಡರು.

ಭಾರತ ತಂಡವು ಎರಡನೇ ಇನಿಂಗ್ಸ್ನಲ್ಲಿ 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ (57; 44ಎ) ಹಾಗೂ ಇಶಾನ್ ಕಿಶನ್ (ಔಟಾಗದೆ 52; 34ಎ) ಅವರು ವೇಗದ ಅರ್ಧಶತಕಗಳನ್ನು ಗಳಿಸಿದರು. ಇಶಾನ್ ಕಿಶನ್ಗೆ ಇದು ಎರಡನೇ ಟೆಸ್ಟ್ ಪಂದ್ಯವಾಗಿದೆ. ಅವರು ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಭಾರತ: 128 ಓವರ್ಗಳಲ್ಲಿ 438.

ವೆಸ್ಟ್ ಇಂಡೀಸ್: 115.4 ಓವರ್ಗಳಲ್ಲಿ 255.

ಎರಡನೇ ಇನಿಂಗ್ಸ್: ಭಾರತ: 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 181 ಡಿಕ್ಲೇರ್ಡ್ (ಯಶಸ್ವಿ ಜೈಸ್ವಾಲ್ 38, ರೋಹಿತ್ ಶರ್ಮಾ 57, ಶುಭಮನ್ ಗಿಲ್ ಔಟಾಗದೆ 29, ಇಶಾನ್ ಕಿಶನ್ ಔಟಾಗದೆ 52)

ವೆಸ್ಟ್ ಇಂಡೀಸ್: 32 ಓವರ್ಗಳಲ್ಲಿ 2 ವಿಕೆಟ್ಗಳಿಗೆ 76 (ಕ್ರೇಗ್ ಬ್ರಾತ್ವೇಟ್ 28, ತೇಜನಾರಾಯಣ ಚಂದ್ರಪಾಲ್ ಬ್ಯಾಟಿಂಗ್ 24, ಜರ್ಮೈನ್ ಬ್ಲ್ಯಾಕ್ವುಡ್ ಬ್ಯಾಟಿಂಗ್ 20, ಆರ್. ಅಶ್ವಿನ್ 33ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.