ಹರಾರೆ: ಭಾರತ ಕ್ರಿಕೆಟ್ ತಂಡದ ಯುವ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.

ಶನಿವಾರ ನಡೆದಿದ್ದ ತಮ್ಮ ಪದಾರ್ಪಣಾ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಅಭಿಷೇಕ್ ನಿರಾಸೆ ಅನುಭವಿಸಿದ್ದರು.

ಆದರೆ ಭಾನುವಾರ ಬಿರುಸಿನ ಆಟವಾಡಿದ ಅಭಿಷೇಕ್, ಕೇವಲ 46 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಹ್ಯಾಟ್ರಿಕ್ ಸಿಕ್ಸರ್ ಗಳಿಸಿದ ಅಭಿಷೇಕ್ ಚೊಚ್ಚಲ ಶತಕದ ಗಡಿ ದಾಟಿದರು. ಆದರೆ ನಂತರದ ಎಸೆತದಲ್ಲಿ ಔಟ್ ಆದರು.

ಅಭಿಷೇಕ್ ಶರ್ಮಾ 47 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಅಮೋಘ ಇನಿಂಗ್ಸ್ನಲ್ಲಿ ಎಂಟು ಸಿಕ್ಸರ್ ಹಾಗೂ ಏಳು ಬೌಂಡರಿಗಳು ಸೇರಿದ್ದವು.

ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಮೂರನೇ ಅತಿ ವೇಗದ ಶತಕವಾಗಿದೆ. 2017ರಲ್ಲಿ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. 2023ರಲ್ಲಿ ಸೂರ್ಯಕುಮಾರ್ ಯಾದವ್ 45 ಎಸೆತ ಮತ್ತು 2016ರಲ್ಲಿ ಕೆ.ಎಲ್. ರಾಹುಲ್ 46 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.