ಹುಬ್ಬಳ್ಳಿ: ಭಾರತ ’ಎ‘ ಹಾಗೂ ನ್ಯೂಜಿಲೆಂಡ್ ’ಎ‘ ತಂಡಗಳ ನಡುವಣ ’ಟೆಸ್ಟ್’ ಪಂದ್ಯಕ್ಕೆ ಶನಿವಾರ ಮತ್ತೆ ಮಳೆ ಅಡ್ಡಿಯಾಗಿದೆ.

ಶುಕ್ರವಾರ ತಡರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ 10 ಗಂಟೆ ತನಕ ತುಂತುರು ಮಳೆ ಮುಂದುವರಿದಿತ್ತು. ಕ್ರೀಡಾಂಗಣ ಸಾಕಷ್ಟು ಹಸಿಯಾಗಿದೆ. ಅದನ್ನು ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಸತತ ಮಳೆ ಹಾಗೂ ಮೈದಾನದಲ್ಲಿ ತೇವಾಂಶ ಆರದ ಕಾರಣ ಬಹುತೇಕ ಊಟದ ವಿರಾಮದ ತನಕ ಪಂದ್ಯ ನಡೆಯುವುದು ಅನುಮಾನ.

ಬಂದು ಹೋದ ಭಾರತದ ಆಟಗಾರರು: ಬೆಳಿಗ್ಗೆ ಎಂದಿನಂತೆ ಭಾರತ ತಂಡದ ಆಟಗಾರರು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ, ಆಟವಾಡಲು ಪರಿಸ್ಥಿತಿ ಅನುಕೂಲವಿಲ್ಲದ್ದರಿಂದ ಹಾಗೂ ಮಧ್ಯಾಹ್ನ ತನಕ ಆಟ ನಡೆಯುವುದು ಸಾಧ್ಯವಿಲ್ಲದ ಕಾರಣ ಆಟಗಾರರು ಹೋಟೆಲ್ಗೆ ಮರಳಿದರು.

ಹೋಟೆಲ್ನಲ್ಲೇ ಉಳಿದ ಕಿವೀಸ್ ತಂಡ: ಮಳೆಯ ಕಾರಣಕ್ಕೆ ಆಟ ಆರಂಭವಾಗುವ ಅನುಮಾನದಿಂದ ಕಿವೀಸ್ ತಂಡದ ಆಟಗಾರರು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬರದೇ ಹೋಟೆಲ್ನಲ್ಲೇ ಉಳಿದರು.

ಮೈದಾನದಲ್ಲಿನ ತೇವಾಂಶ ಆರದ ಕಾರಣ ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟವೂ ಬಲಿಯಾಗಿತ್ತು. ಎರಡನೇ ದಿನ ಪಂದ್ಯ ಆರಂಭಗೊಂಡರೂ, ಆಗಾಗ ಮಳೆ ಕಾಡಿದ್ದರಿಂದ 66 ಓವರ್ಗಳಷ್ಟೇ ಪಂದ್ಯ ನಡೆದಿತ್ತು.

ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ ಅಂತ್ಯಕ್ಕೆ 6ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಆಡುತ್ತಿದೆ. ವಿಕೆಟ್ ಕೀಪರ್ ಕೆ.ಎಸ್.ಭರತ್(74) ಹಾಗೂ ರಾಹುಲ್ ಚಾಹರ್ (4) ಕ್ರೀಸ್ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.