ಹುಬ್ಬಳ್ಳಿ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿರುವ ಭಾರತ ‘ಎ‘ ತಂಡವು ಶುಕ್ರವಾರ ಊಟದ ವಿರಾಮದ ವೇಳೆ 19 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 57 ರನ್‌ಗಳಿಸಿದೆ.

ಆತಿಥೇಯ ತಂಡ ನಾಯಕ ಪ್ರಿಯಾಂಕ್ ಪಾಂಚಾಲ್ ರಕ್ಷಣಾತ್ಮ ಆಟಕ್ಕೆ ಮೊರೆ ಹೋಗಿದ್ದು, 59 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ 25 ರನ್ ಗಳಿಸಿ ಆಡುತ್ತಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ರಜತ್ ಪಾಟೀದಾರ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಪ್ರವಾಸಿ ತಂಡದ ನಾಯಕ ಟಾಮ್ ಬ್ರೂಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಿರ್ಧಾರವನ್ನು ಸಮರ್ಥಿಸುವಂತೆ ಕಿವೀಸ್ ಬೌಲರ್‌ಗಳು ಬಿರುಸಿನ ದಾಳಿ ನಡೆಸಿದರು.

ಭಾರತ ‘ಎ‘ ಹಾಗೂ ನ್ಯೂಜಿಲೆಂಡ್ ’ಎ‘ ತಂಡಗಳ ನಡುವಣ ’ಟೆಸ್ಟ್’ ಪಂದ್ಯ

ಪಂದ್ಯದ 12 ಓವರ್ ಬೌಲ್ ಮಾಡಿದ ಲೋಗನ್ ವ್ಯಾನ್ ಬೀಕ್ ನಾಲ್ಕನೇ ಎಸೆತದಲ್ಲೇ ಅಭಿಮನ್ಯು ಈಶ್ವರನ್ ಅವರ ವಿಕೆಟ್ ಪಡೆದರು.

36 ಎಸೆತದಲ್ಲಿ ಎದುರಿಸಿ ಐದು ಬೌಂಡರಿ ಸೇರಿದಂತೆ 22 ರನ್‌ಗಳಿಸಿದ್ದ ಅಭಿಮನ್ಯು ಈಶ್ವರನ್ 12 ಓವರ್ ನಾಲ್ಕನೇ ಎಸೆತದಲ್ಲಿ ಸೆಕೆಂಡ್ ಸ್ಲಿಪ್‌ನಲ್ಲಿದ್ದ ಟಾಮ್ ಬ್ರೂಸ್‌ಗೆ ಕ್ಯಾಚಿತ್ತರು.

ನಂತರ ಕ್ರಿಸ್‌ಗೆ ಬಂದ ಋತುರಾಜ ಗಾಯಕವಾಡ ಕೂಡ ತುಂಬ ಹೊತ್ತು ನಿಲ್ಲಲಿಲ್ಲ. ಪಂದ್ಯದ 18ನೇ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಬ್ಯಾಟ್ ಅಂಚು ತಾಗಿ ಬಂದ ಚೆಂಡನ್ನು ಹಿಡಿಯುವಲ್ಲಿ ವಿಕೇಟ್ ಕೀಪರ್ ಕ್ಯಾಮ್ ಫ್ಲೆಚರ್ ಯಾವುದೇ ತಪ್ಪು ಮಾಡಲಿಲ್ಲ.

ಏಷ್ಯಾಕಪ್ 2022| ಅಫ್ಗನ್–ಪಾಕ್ ಅಭಿಮಾನಿಗಳ ಘರ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.