ಬರ್ಮಿಂಗ್ಹ್ಯಾಂ: ‘ಭಾರತ ಕ್ರಿಕೆಟ್ ತಂಡ ಈಗ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಒಳಗೊಂಡಿದ್ದು ತಂಡದ ಈ ಬಾರಿಯ ಪ್ರವಾಸದಲ್ಲಿ ಅದು ಪ್ರಮುಖ ಪಾತ್ರ ವಹಿಸಲಿದೆ’ ಎಂದು ಇಂಗ್ಲೆಂಡ್ ತಂಡದ ಹಿರಿಯ ಆಟಗಾರ ಅಲೆಸ್ಟರ್ ಕುಕ್ ಅಭಿಪ್ರಾಯಪಟ್ಟರು.

‘ಕೆಲವು ವರ್ಷಗಳ ಹಿಂದೆ ಭಾರತ ತಂಡ ಗುಣಮಟ್ಟದ ದಾಳಿ ನಡೆಸುವ ವೇಗಿಗಳ ಹುಡುಕಾಟದಲ್ಲಿತ್ತು. ಆದರೆ ಈಗ ಕನಿಷ್ಠ ಐದರಿಂದ ಆರು ಮಂದಿಯನ್ನು ಆಡಿಸುವಷ್ಟು ಬಲಿಷ್ಠವಾಗಿದೆ. ನಾನು ಈ ಹಿಂದೆ ಎದುರಿಸಿದ ತಂಡಕ್ಕೂ ಈ ಬಾರಿ ಇಲ್ಲಿಗೆ ಬಂದಿರುವ ತಂಡಕ್ಕೂ ಭಾರಿ ವ್ಯತ್ಯಾಸವಿದೆ’ ಎಂದು ಅವರು ಹೇಳಿದರು.

ಸಂಯಮದಿಂದ ಆಡಬೇಕು: ‘ಇಂಗ್ಲೆಂಡ್ನ ಪಿಚ್ ವೇಗದ ಬೌಲರ್ಗಳಿಗೆ ನೆರವಾಗುತ್ತದೆ. ಆದರೂ ಸಂಯಮದಿಂದ ಬೌಲಿಂಗ್ ಮಾಡದಿದ್ದರೆ ಬ್ಯಾಟ್ಸ್ಮನ್ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ಬೌಲರ್ಗಳು ಪ್ರತಿ ಟೆಸ್ಟ್ನಲ್ಲಿ ಎದುರಾಳಿಗಳ ಇಪ್ಪತ್ತು ವಿಕೆಟ್ಗಳನ್ನು ಉರುಳಿಸುವ ಗುರಿಯೊಂದಿಗೆ ಆಡಬೇಕು’ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟರು.

ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ ಒಂದರಂದು ಇಲ್ಲಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.