ಕ್ರೈಸ್ಟ್ಚರ್ಚ್: ಭಾರತ ‘ಎ’ ತಂಡದವರು ನ್ಯೂಜಿಲೆಂಡ್ ‘ಎ’ ಎದುರಿನ ನಾಲ್ಕು ದಿನಗಳ ಮೊದಲ ‘ಟೆಸ್ಟ್’ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ್ದಾರೆ.

ಹೇಗ್ಲೆ ಓವಲ್ ಮೈದಾನದಲ್ಲಿ 5 ವಿಕೆಟ್ಗೆ 385ರನ್ಗಳಿಂದ ಶನಿವಾರ ಮೊದಲ ಇನಿಂಗ್ಸ್ನ ಆಟ ಮುಂದುವರಿಸಿದ ನ್ಯೂಜಿಲೆಂಡ್ ‘ಎ’ ತಂಡ 160.3 ಓವರ್ಗಳಲ್ಲಿ 7 ವಿಕೆಟ್ಗೆ 562ರನ್ ಕಲೆಹಾಕಿ ಡಿಕ್ಲೇರ್ಡ್ ಮಾಡಿಕೊಂಡಿತು.

ಮಾರ್ಕ್ ಚಾಪ್ಮನ್ (114; 245ಎ, 11ಬೌಂ) ಮತ್ತು ವಿಕೆಟ್ ಕೀಪರ್ ಡೇನ್ ಕ್ಲೀವರ್ (196; 344ಎ, 20ಬೌಂ, 1ಸಿ) ಮೂರನೇ ದಿನವೂ ಭಾರತದ ಬೌಲರ್ಗಳನ್ನು ಕಾಡಿದರು. ಶುಕ್ರವಾರ 111ರನ್ ಗಳಿಸಿ ಕ್ರೀಸ್ನಲ್ಲಿ ಉಳಿದಿದ್ದ ಕ್ಲೀವರ್ ದ್ವಿಶತಕದ ಅಂಚಿನಲ್ಲಿ ಎಡವಿದರು. 85ರನ್ ಬಾರಿಸಿದ್ದ ಚಾಪ್ಮನ್ ಈ ಮೊತ್ತಕ್ಕೆ 29ರನ್ ಸೇರಿಸಿ ಔಟಾದರು.

ಎರಡನೇ ಇನಿಂಗ್ಸ್ ಆರಂಭಿಸಿರುವ ಹನುಮ ವಿಹಾರಿ ನೇತೃತ್ವದ ಭಾರತ ‘ಎ’ ತಂಡ ದಿನದಾಟದ ಅಂತ್ಯಕ್ಕೆ 37 ಓವರ್ಗಳಲ್ಲಿ 2 ವಿಕೆಟ್ಗೆ 127ರನ್ ಗಳಿಸಿದೆ. ಭಾನುವಾರ ಅಂತಿಮ ದಿನವಾಗಿದ್ದು ಎದುರಾಳಿಗಳ ಲೆಕ್ಕ ಚುಕ್ತಾ ಮಾಡಲು ಹನುಮ ಪಡೆ ಇನ್ನೂ 219ರನ್ ಕಲೆಹಾಕಬೇಕಿದೆ.

ಸಂಕ್ಷಿಪ್ತ ಸ್ಕೋರ್: ಭಾರತ ‘ಎ’: ಮೊದಲ ಇನಿಂಗ್ಸ್; 54.1 ಓವರ್ಗಳಲ್ಲಿ 216 ಮತ್ತು 37 ಓವರ್ಗಳಲ್ಲಿ 2 ವಿಕೆಟ್ಗೆ 127 (ಅಭಿಮನ್ಯು ಈಶ್ವರನ್ 26, ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ 67, ಶುಭಮನ್ ಗಿಲ್ ಬ್ಯಾಟಿಂಗ್ 33; ಮೈಕಲ್ ರಯೀ 16ಕ್ಕೆ1, ಅಜಾಜ್ ಪಟೇಲ್ 42ಕ್ಕೆ1).

ನ್ಯೂಜಿಲೆಂಡ್ ‘ಎ’; ಪ್ರಥಮ ಇನಿಂಗ್ಸ್: 160.3 ಓವರ್ಗಳಲ್ಲಿ 7 ವಿಕೆಟ್ಗೆ 562 ಡಿಕ್ಲೇರ್ಡ್ (ಮಾರ್ಕ್ ಚಾಪ್ಮನ್ 114, ಡೇನ್ ಕ್ಲೀವರ್ 196, ಕೋಲ್ ಮೆಕೊಂಚೀ ಔಟಾಗದೆ 50; ಮೊಹಮ್ಮದ್ ಸಿರಾಜ್ 128ಕ್ಕೆ1, ಇಶಾನ್ ಪೊರೆಲ್ 90ಕ್ಕೆ2, ಸಂದೀಪ್ ವಾರಿಯರ್ 91ಕ್ಕೆ2, ವಿಜಯ ಶಂಕರ್ 74ಕ್ಕೆ1, ಶಹಬಾಜ್ ನದೀಮ್ 120ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.