ಬೆಂಗಳೂರು: ಕರ್ನಾಟಕದ ಧನುಷ್ ಗೌಡ ಅವರು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮುಂದಿನ ವರ್ಷದ ಜನವರಿ 19ರಿಂದ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿಯು ನಡೆಯಲಿದೆ. ಮಂಗಳವಾರ ಬಿಸಿಸಿಐ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದೆ. ಸದ್ಯ 19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ತಂಡದ ಬಹುತೇಕ ಆಟಗಾರರನ್ನು ವಿಶ್ವಕಪ್ ಟೂರ್ನಿಗೂ ಉಳಿಸಿಕೊಂಡಿದೆ. ಇದೇ ತಂಡವು ಡಿ.29ರಿಂದ ನಡೆಯುವ ತ್ರಿಕೋನ ಸರಣಿಯಲ್ಲಿಯೂ ಕಣಕ್ಕಿಳಿಯಲಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಆಡಲಿವೆ.

ಧನುಷ್ ಗೌಡ ಬಲಗೈ ಮಧ್ಯಮವೇಗಿಯಾಗಿದ್ದಾರೆ. 19 ವರ್ಷದೊಳಗಿನವರ ಭಾರತ ಬಿ ತಂಡವನ್ನು ಅವರು ಪ್ರತಿನಿಧಿಸಿದ್ದರು.

ತ್ರಿಕೋನ ಸರಣಿ ಹಾಗೂ 19 ವರ್ಷದೊಳಗಿನ ವಿಶ್ವಕಪ್ಗೆ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡ ಇಂತಿದೆ;

ಉದಯ್ ಸಹರಾನ್ (ನಾಯಕ), ಸೌಮ್ಯಕುಮಾರ್ ಪಾಂಡೆ (ಉಪನಾಯಕ), ಅರ್ಷಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮಾಲಿಯಾ, ಮುಷೀರ್ ಖಾನ್, ಮುರುಗನ್ ಅಭಿಷೇಕ್, ಅರವೆಲ್ಲಿ ಅವಿನಾಶ್ ರಾವ್ (ವಿಕೆಟ್ಕೀಪರ್), ಇನೇಶ್ ಮಹಾಜನ್ (ವಿಕೆಟ್ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.