ದುಬೈ: ಅಸಾಂಪ್ರಾದಾಯಿಕ ಹೊಡೆತಗಳ ಬ್ಯಾಟಿಂಗ್ ಶೈಲಿಯ ಮೂಲಕ ರಂಜಿಸಿದ ಅಫ್ಗಾನಿಸ್ತಾನದ ಮೊಹಮ್ಮದ್ ಶೆಹಜಾದ್ ಅವರು ಮಂಗಳವಾರ ಭಾರತದ ಬೌಲರ್ಗಳ ಬೆವರಿಳಿಸಿದರು.

ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಶೆಹಜಾದ್ (124; 116ಎ, 11ಬೌಂಡರಿ, 7ಸಿಕ್ಸರ್) ಅಮೋಘ ಶತಕದ ಬಲದಿಂದ ಅಫ್ಗಾನಿಸ್ತಾನ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 252 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತವೂಇಷ್ಟೇ ರನ್ಗಳಿಸಿ ಆಲೌಟ್ ಆಯಿತು.

ಭಾರತ ಈಗಾಗಲೇ ಫೈನಲ್ ಪ್ರವೇಶಿಸಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಮಹೇಂದ್ರಸಿಂಗ್ ಧೋನಿ ತಂಡದ ಸಾರಥ್ಯ ವಹಿಸಿದ್ದರು.

ಭಾರತ ಪರಇನಿಂಗ್ಸ್ ಆರಂಭಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್(60) ಮತ್ತು ಅಂಬಟಿ ರಾಯುಡು(57) ಶತಕದ ಜೊತೆಯಾಟವಾಡಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ತಂಡದ ಗೆಲುವಿಗೆ ಕೊನೆಯ ಓವರ್ನಲ್ಲಿ ಏಳು ರನ್ ಅಗತ್ಯವಿತ್ತು. ರವೀಂದ್ರ ಜಡೇಜಾ ಹಾಗೂ ಖಲೀಲ್ ಅಹಮದ್ ಕ್ರೀಸ್ನಲ್ಲಿದ್ದರು.

ಅಫ್ಘಾನಿಸ್ತಾನ ಪರಕೊನೆಯ ಓವರ್ ಎಸೆದ ರಶೀದ್ ಖಾನ್, ಅಂತಿಮ ವಿಕೆಟ್ ರೂಪದಲ್ಲಿ ಜಡೇಜಾಗೆ ಪೆವಿಲಿಯನ್ ಹಾದಿ ತೋರಿದರು. ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸ ಬೇಕಿದ್ದ ವೇಳೆ ಗೊಂದಲಕ್ಕೊಳಗಾದ ಜಡೇಜಾ, ನಜೀಬುಲ್ಲಾಗೆ ಕ್ಯಾಚ್ ನೀಡಿ ನಿರ್ಗಮಸಿದರು.ಇದರೊಂದಿಗೆ ಪಂದ್ಯರೋಚಕ ‘ಟೈ’ನೊಂದಿಗೆ ಮುಕ್ತಾಯವಾಯಿತು.

ಪಂದ್ಯವಾಳಿಯುದ್ದಕ್ಕೂಉತ್ತಮವಾಗಿ ಆಡಿ ಅಭಿಮಾನಿಗಳ ಮನ ಗೆದ್ದಿರುವ ಅಫ್ಗಾನಿಸ್ತಾನ ತಂಡವು ಭಾರತ ತಂಡಕ್ಕೂ ದಿಟ್ಟ ಸವಾಲು ಒಡ್ಡಿತು.

‘ಕ್ರಾಸ್ ಬ್ಯಾಟ್’ ಮಿಂಚು

ಆರಂಭಿಕ ಬ್ಯಾಟ್ಸ್ಮನ್ ಶೆಹಜಾದ್ ತಮಗೆ ಲಭಿಸಿದ ಒಂದು ಜೀವದಾನದ ಲಾಭ ಪಡೆದರು. ‘ಕ್ರಾಸ್ ಬ್ಯಾಟ್’ ಹೊಡೆತಗಳ ಮೂಲಕ ಬೌಲರ್ಗಳ ಲಯ ತಪ್ಪಿಸಿದರು.

ಇನ್ನೊಂದು ಬದಿಯಲ್ಲಿ ವಿಕೆಟ್ಗಳು ಉದುರುತ್ತಿದ್ದರೂ ಶೆಹಜಾದ್ ಅಂಜದೆ, ಅಳುಕದೇ ಬ್ಯಾಟ್ ಬೀಸಿದರು. ಏಳು ಅಮೋಘ ಸಿಕ್ಸರ್ಗಳನ್ನು ಬಾರಿಸಿದರು.

ಅಂತಿಮ ಓವರ್ಗಳಲ್ಲಿ ಮೊಹಮ್ಮದ್ ನೈಬಿ ಕೂಡ ಮಿಂಚಿದರು. ಅವರು ಮಿಂಚಿನ ಅರ್ಧಶತಕ ಹೊಡೆದು ತಂಡವು ಹೋರಾಟದ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ರವೀಂದ್ರ ಜಡೇಜ ಮೂರು ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ಗಳನ್ನು ಕಬಳಿಸಿದರು. ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಒಂದು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.