ನಾಗಪುರ: ಆಸ್ಟ್ರೇಲಿಯಾ ತಂಡದ ವಿರುದ್ಧ ಐದು ವಿಕೆಟ್ ಗಳಿಸಿದ ಭಾರತದ ರವೀಂದ್ರ ಜಡೇಜ ತಮ್ಮ ಎಡಗೈ ಬೆರಳಿಗೆ ‘ಮುಲಾಮು’ ಹಚ್ಚಿಕೊಂಡು ಬೌಲಿಂಗ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಜಡೇಜ ಅವರು ತಮ್ಮ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರು ಕೊಟ್ಟ ಮುಲಾಮನ್ನು ಎಡಗೈ ತೋರುಬೆರಳಿಗೆ ಉಜ್ಜಿಕೊಂಡಿರುವುದು ದಾಖಲಾಗಿದೆ. ಈ ವಿಡಿಯೊ ಕುರಿತು ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಜಡೇಜ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಜಡೇಜ ಅವರ ಬೆರಳಿನ ನೋವಿನ ಶಮನಕ್ಕಾಗಿ ಮುಲಾಮು ಲೇಪಿಸಲಾಗಿದೆ’ ಎಂದು ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.