ಬ್ರಿಡ್ಜ್‌ಟೌನ್: ವೆಸ್ಟ್ ಇಂಡೀಸ್‌ನ ಬ್ರಿಡ್ಜ್ ಟೌನ್‌ನಲ್ಲಿ ಭಾರತ ವಿರುದ್ಧ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.

ಭಾರತ ನೀಡಿದ್ದ 182 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 36.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತ್ತು್. ಬೌಲರ್‌ಗಳಿಗೆ ಅನುಕೂಲಕರವಾದ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಭಾರತದ ಪರ ಇಶಾನ್ ಕಿಶನ್ 55, ಶುಭಮನ್ ಗಿಲ್ 34 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಬ್ಯಾಟರ್ ಸಹ ನೆಲೆಯೂರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡ 40.1 ಓವರ್‌ನಲ್ಲಿ 181 ರನ್‌ಗೆ ಆಲೌಟ್ ಆಯಿತು.

ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಶಾಯ್ ಹೋಪ್ ಅವರ ಅಜೇಯ 63 ರನ್ ನೆರವಿನಿಂದ 36.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. 48 ರನ್ ಸಿಡಿಸಿದ ಕೀಸಿ ಕಾರ್ಟಿ ಹೋಪ್‌ಗೆ ಉತ್ತಮ ಜೊತೆಯಾಟ ನೀಡಿದರು.

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–1ರಿಂದ ಉಭಯ ತಂಡಗಳು ಸಮಬಲ ಸಾಧಿಸಿವೆ. ಮುಂದಿನ ಪಂದ್ಯ ಆಗಸ್ಟ್ 1ರಂದು ಮಂಗಳವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತ 40.1 ಓವರ್‌ನಲ್ಲಿ 181 ರನ್

– ಇಶಾನ್ ಕಿಶನ್: 55 ರನ್

– ಶುಭಮನ್ ಗಿಲ್: 34 ರನ್

ಬೌಲಿಂಗ್:

– ಗುಡಕೇಶ್ ಮೋತಿ: 36/3

– ರೊಮಾರಿಯೊ ಶೆಫರ್ಡ್: 37/3

ವೆಸ್ಟ್ ಇಂಡೀಸ್: 36.4 ಓವರ್‌ಗಳಲ್ಲಿ 182 ರನ್

– ಶಾಯ್ ಹೋಪ್: ಅಜೇಯ 63 ರನ್

– ಕೀಸಿ ಕಾರ್ಟಿ: 48 ರನ್

ಬೌಲಿಂಗ್:

ಶಾರ್ದೂಲ್ ಠಾಕೂರ್: 42/3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.