ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮಳೆ ಬಂದಾಗ ಪಿಚ್‌ಗೆ ಹೊದಿಕೆ ಹಾಕಲು ಶ್ರಮಿಸಿದ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಮಳೆ ಬಂದಾಗ ಪಿಚ್‌ಗೆ ಹೊದಿಕೆ ಹಾಕಲು ಶ್ರಮಿಸಿದ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮಳೆ ಬಂದಾಗ ಪಿಚ್‌ಗೆ ಹೊದಿಕೆ ಹಾಕಲು ಶ್ರಮಿಸಿದ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಮೊದಲ ಮಹಿಳಾ ಕ್ಯೂರೇಟರ್
ದೇಶಕ್ಕೆ ಮೊಟ್ಟಮೊದಲ ಮಹಿಳಾ ಪಿಚ್ ಕ್ಯೂರೇಟರ್ ನೀಡಿದ ಹೆಗ್ಗಳಿಕೆಯೂ ಕೆಎಸ್‌ಸಿಎಗೆ ಸಲ್ಲುತ್ತದೆ. ಜೆಸಿಂತಾ ಕಲ್ಯಾಣ ಅವರು ಸಂಸ್ಥೆಯ ಕಚೇರಿಯ ಉದ್ಯೋಗಿಯಾಗಿದ್ದವರು. ಪಿಚ್ ಬಗ್ಗೆ ಆಸಕ್ತಿ ತೋರುತ್ತ ಕಾರ್ಯನಿರ್ವಹಿಸತೊಡಗಿದರು. ಅದರಲ್ಲಿ ಹೆಚ್ಚು ಶ್ರಮವಹಿಸಿದರು. ಬಿಸಿಸಿಐ ನಡೆಸುವ ಅರ್ಹತಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದರು. ಪಿಚ್ ನಿರ್ವಹಣೆ ಪುರುಷರಿಗಷ್ಟೇ ಸೀಮಿತವಲ್ಲ. ಮಹಿಳೆಯರೂ ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ‘ನಮ್ಮ ಆಡಳಿತ ಮಂಡಳಿ ಸಿಬ್ಬಂದಿಯ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಆತ್ಮತೃಪ್ತಿ ಇದೆ‘ ಎಂದು ಜೆಸಿಂತಾ ಸಂತಸ ವ್ಯಕ್ತಪಡಿಸುತ್ತಾರೆ.