ಬೆಂಗಳೂರು: ಕನ್ನಡಿಗ ಕೃಷ್ಣಪ್ಪ ಗೌತಮ್ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಅದೃಷ್ಟಲಕ್ಷ್ಮೀ ಒಲಿದಳು.

ಕರ್ನಾಟಕ ತಂಡದ ಆಲ್ರೌಂಡರ್ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಫ್ರ್ಯಾಂಚೈಸಿಯು ₹ 9.25 ಕೋಟಿ ನೀಡಿ ಖರೀದಿಸಿತು. ಆಫ್ಸ್ಪಿನ್ನರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಆಟಗಾರ ಗೌತಮ್ ಅವರು ಬೆಂಗಳೂರಿನವರು.

ಸದ್ಯ ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿರುವ ಭಾರತ ತಂಡದಲ್ಲಿ ನೆಟ್ಸ್ ಬೌಲರ್ ಆಗಿದ್ದಾರೆ. ಹೋದ ವರ್ಷ ಗೌತಮ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡ (ಕಿಂಗ್ಸ್ ಪಂಜಾಬ್) ವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿಯೂ ಇದ್ದರು. ಐಪಿಎಲ್ನಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿರುವ ಗೌತಮ್ 186 ರನ್ ಗಳಿಸಿದ್ದಾರೆ. 13 ವಿಕೆಟ್ಗಳನ್ನೂ ಕಬಳಿಸಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿಯೂ ಹೋದ ಬಾರಿ ಮಿಂಚಿದ್ದರು.

ಇದೀಗ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡದಲ್ಲಿ ಈ ಬಾರಿ ಅವರು ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಚೆನ್ನೈ ತಂಡವು ಇಂಗ್ಲೆಂಡ್ನ ಮೋಯಿನ್ ಅಲಿ ಅವರನ್ನು ಏಳು ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.

ಗುರುವಾರ ಮಧ್ಯಾಹ್ನ ಬಿಡ್ ಆರಂಭವಾದಾಗ ಕರ್ನಾಟಕದ ಕರುಣ್ ನಾಯರ್ ಅವರ ಹೆಸರು ಮೊದಲಿಗೆ ಹರಾಜಿಗೆ ಬಂದಿತು. ಆದರೆ ಯಾವುದೇ ಫ್ರ್ಯಾಂಚೈಸಿಯು ಅವರನ್ನು ಪಡೆದುಕೊಳ್ಳಲು ಆಸಕ್ತಿ ತೋರಲಿಲ್ಲ.

ಈ ಬಾರಿ ಚೆನ್ನೈ ಬಳಗದಲ್ಲಿ ಸ್ಥಾನ ಪಡೆದ ಎರಡನೇ ಕನ್ನಡಿಗ ಗೌತಮ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.