ನವದೆಹಲಿ: ಕೇವಲ ಇಪ್ಪತ್ತು ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಂಬಟಿ ರಾಯುಡು ಅಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಇಂಡಿಯನ್ಸ್ ಬೌಲರ್ಗಳು ದಿಕ್ಕು ತಪ್ಪಿದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 218 ರನ್ಗಳ ಬೃಹತ್ ಮೊತ್ತ ಗಳಿಸಿತು. ಅಂಬಟಿ ರಾಯುಡು (ಔಟಾಗದೆ 72; 27ಎಸೆತ, 3ಬೌಂಡರಿ, 7ಸಿಕ್ಸರ್) ಕೊನೆಯ ಐದು ಓವರ್ಗಳಲ್ಲಿ 82 ರನ್ಗಳು ಹರಿದುಬಂದವು.

ಚೆನ್ನೈ ಇನಿಂಗ್ಸ್ಗೆ ಶತಕದ ಎರಡು ಜೊತೆಯಾಟಗಳು ಬಲ ತುಂಬಿದವು. ಫಫ್ ಡುಪ್ಲೆಸಿ (50; 28ಎ) ಮತ್ತು ಮೋಯಿನ್ ಅಲಿ (58; 36ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 108 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಇವರಿಬ್ಬರ ಅಬ್ಬರದಿಂದಾಗಿ 11 ಓವರ್ಗಳಲ್ಲಿಯೇ ತಂಡವು 112 ರನ್ ಗಳಿಸಿತ್ತು. ಆದರೆ ಈ ಮೊತ್ತಕ್ಕೆ ಮುಂದೆ ನಾಲ್ಕು ರನ್ಗಳು ಸೇರುವಷ್ಟರಲ್ಲಿ ಮೂರು ವಿಕೆಟ್ಗಳು ಪತನವಾದವು. 11ನೇ ಓವರ್ನಲ್ಲಿ ಮೋಯಿನ್ ಅಲಿ ವಿಕೆಟ್ ಜಸ್ಪ್ರೀತ್ ಬೂಮ್ರಾ ಕಬಳಿಸಿದರು.

ನಂತರದ ಓವರ್ನಲ್ಲಿ ಕೀರನ್ ಪೊಲಾರ್ಡ್ ಡುಪ್ಲೆಸಿ ಮತ್ತು ಸುರೇಶ್ ರೈನಾ ವಿಕೆಟ್ ಪಡೆದು ಸಂಭ್ರಮಿಸಿದರು. ಇದರ ನಂತರ ಮುಂಬೈ ಆಟಗಾರರಿಗೆ ಸಡಗರಪಡುವ ಅವಕಾಶವನ್ನು ಅಂಬಟಿ ಮತ್ತು ರವೀಂದ್ರ ಜಡೇಜ (ಔಟಾಗದೆ 22; 22ಎ) ಕೊಡಲಿಲ್ಲ.

ಅಂಬಟಿ ಅಬ್ಬರಿಸುತ್ತಿದ್ದರೆ, ಜಡೇಜ ಅವರಿಗೆ ಬೆಂಬಲ ಕೊಡುತ್ತ ಶಾಂತಚಿತ್ತದಿಂದ ಬ್ಯಾಟ್ ಬೀಸಿದರು. ಒಂದು ಬಾರಿ ಎಲ್ಬಿಡಬ್ಲ್ಯು ಮನವಿಯಲ್ಲಿ ಅಂಪೈರ್ ಔಟ್ ಕೊಟ್ಟಾಗ ಜಡೇಜ ಯುಡಿಆರ್ಎಸ್ ಪಡೆದು ಗೆ್ದ್ದರು. ಇದರಿಂದಾಗಿ ಜೊತೆಯಾಟವು ಕೊನೆಯ ಎಸೆತದವರೆಗೂ ಮುಂದುವರೆಯಿತು. 102 ರನ್ಗಳು ಹರಿದುಬಂದವು.

ವಿಭಿನ್ಯ ಶೈಲಿಯ ಪಾದಚಲನೆಯಿಂದ ಬ್ಯಾಟಿಂಗ್ ಮಾಡಿದ ಅಂಬಟಿ ಆಟ ರಂಗೇರಿತು. 20ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಡ್ರೈವ್, ಪುಲ್ ಶಾಟ್ಗಳ ಮೂಲಕ ಮನಮೋಹಕ ಸಿಕ್ಸರ್ಗಳನ್ನು ಸಿಡಿಸಿದರು. ಗ್ಯಾಪ್ಗಳಲ್ಲಿ ಬೌಂಡರಿಗೆ ಚೆಂಡನ್ನು ಅಟ್ಟಿದ ರೀತಿ ಚಿತ್ತಾಪಹಾರಿಯಾಗಿತ್ತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮಾಡಿದ ಯೋಜನೆಗಳೆಲ್ಲವೂ ತಲೆಕೆಳಗಾದವು. ಮೊದಲ ಓವರ್ನಲ್ಲಿ ಎಡಗೈ ಮಧ್ಯಮವೇಗಿ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಋತುರಾಜ್ ಗಾಯಕವಾಡ್ (4 ರನ್) ಔಟಾಗಿದರು. ಈ ಹಂತದಲ್ಲಿ ಇನಿಂಗ್ಸ್ ಮೇಲೆ ಹಿಡಿತ ಸಾಧಿಸುವಲ್ಲಿ ಮುಂಬೈ ಬೌಲರ್ಗಳು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.