ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ ಎಂದು ವರದಿಯಾಗಿದೆ.

ಸಮಾರೋಪ ಸಮಾರಂಭದ ಕಾರ್ಯಕ್ರಮ ಆಯೋಜನೆಯಾಗುವ ಹಿನ್ನೆಲೆಯಲ್ಲಿ ಐಪಿಎಲ್ ಫೈನಲ್ ಪಂದ್ಯವು ಅರ್ಧ ತಾಸು ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಎವಿನ್ ಲೂಯಿಸ್ ಪಡೆದ ಮ್ಯಾಚ್ ವಿನ್ನಿಂಗ್ ಕ್ಯಾಚ್; ಕೆಕೆಆರ್ ಕನಸು ಭಗ್ನ

'ಕ್ರಿಕ್‌ಬಜ್' ವರದಿ ಪ್ರಕಾರ ಬಾಲಿವುಡ್ ಸೆಲೆಬ್ರಿಟಿಗಳನ್ನು ಒಳಗೊಂಡ ಸಮಾರೋಪ ಸಮಾರಂಭವು ರಾತ್ರಿ 6.30ಕ್ಕೆ ಆರಂಭವಾಗಲಿದ್ದು, 50 ನಿಮಿಷಗಳ ಕಾಲ ನಡೆಯಲಿದೆ.

ಹಾಗಾಗಿ ಐಪಿಎಲ್ ಫೈನಲ್ ಟಾಸ್ 7.30ಕ್ಕೆ ನಡೆಯಲಿದ್ದು, ಪಂದ್ಯ 8.00ಕ್ಕೆ ಸರಿಯಾಗಿ ಆರಂಭವಾಗಲಿದೆ.

ಐಪಿಎಲ್ ಫೈನಲ್ ಪಂದ್ಯವು ಮೇ 29, ಭಾನುವಾರದಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಲೀಗ್ ಹಂತದ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗಿದೆ. ಪ್ಲೇ-ಆಫ್ ಪಂದ್ಯಗಳ ಸಮಯದಲ್ಲೂ ಬದಲಾವಣೆಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.