ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ಮಿಲ್ಲರ್ ಅಜೇಯ 94 ರನ್ ಗಳಿಸಿ ಗುಜರಾತ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದನ್ನೂ ಓದಿ:IPL 2022 GT vs CSK: ಮಿಲ್ಲರ್ 'ಕಿಲ್ಲರ್'; ಗುಜರಾತ್ ಟಾಪ್, ಚೆನ್ನೈಗೆ ಶಾಕ್

ಈ ನಡುವೆ ನಿರ್ಣಾಯಕ ಹಂತದಲ್ಲಿ ಶಿವಂ ದುಬೆ ಕ್ಯಾಚ್ ಹಿಡಿಯಲು ಯತ್ನಿಸದಿರುವುದು ನಾಯಕ ರವೀಂದ್ರ ಜಡೇಜ ಹಾಗೂ ಬೌಲರ್ ಡ್ವೇನ್ ಬ್ರಾವೊ ಅಸಮಾಧಾನಕ್ಕೆ ಕಾರಣವಾಗಿದೆ.

ಗುಜರಾತ್ ಚೇಸಿಂಗ್ ವೇಳೆ ಬ್ರಾವೊ ಎಸೆದ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ಘಟನೆ ನಡೆದಿತ್ತು. ಮಿಲ್ಲರ್ ಹೊಡೆದ ಚೆಂಡು ದುಬೆಯತ್ತ ಧಾವಿಸುತ್ತಿತ್ತು. ಆದರೆ ಚೆಂಡಿನತ್ತ ಓಡೋಡಿ ಬಂದ ದುಬೆ, ಇನ್ನೇನು ಕ್ಯಾಚ್ ಹಿಡಿಯುವಷ್ಟರಲ್ಲಿ ಏಕಾಏಕಿ ನಿಂತು ಬಿಟ್ಟರು. ಇದರಿಂದಾಗಿ ಕ್ಯಾಚ್ ಹಿಡಿಯುವ ಅವಕಾಶ ಕೈತಪ್ಪಿತು.

ರಾತ್ರಿಯಲ್ಲಿ ಬೆಳಕು ದುಬೆಗೆ ಅಡಿಯಾಯಿತೇ ಎಂಬುದು ತಿಳಿದು ಬಂದಿಲ್ಲ. ಆದರೆ ಕನಿಷ್ಠ ಕ್ಯಾಚ್ ಹಿಡಿಯಲು ಪ್ರಯತ್ನಿಸದಿರುವುದು ಆಶ್ಚರ್ಯ ಮೂಡಿಸಿದೆ.

ಈ ಸಂದರ್ಭದಲ್ಲಿ ಕುಪಿತರಾದ ಜಡೇಜ, ಕ್ಯಾಪ್ ನೆಲಕ್ಕೆ ಎಸೆಯಲು ಮುಂದಾದರು. ಇನ್ನೊಂದೆಡೆ ಬ್ರಾವೊ ಕೂಡ ಅಸಮಾಧಾನ ತೋರ್ಪಡಿಸಿದರು.

ಒಂದು ವೇಳೆ ದುಬೆ ಕ್ಯಾಚ್ ಹಿಡಿಯಲು ಯಶಸ್ವಿಯಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.